ಮುಖ್ಯಮಂತ್ರಿ ಎದುರೇ ಕೈ ಕೈ ಮಿಲಾಯಿಸಲು ಮುಂದಾದ ಅಶ್ವಥ್ ನಾರಾಯಣ್ ಹಾಗೂ ಡಿ ಕೆ ಸುರೇಶ

ರಾಮನಗರ : ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸೋಮವಾರ ನಡೆದ ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳ ಚಾಲನೆ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ಸಚಿವ ಸಿ ಎನ್ ಅಶ್ವತ್ಥನಾರಾಯಣ ಹಾಗೂ ಸಂಸದ ಡಿಕೆ ಸುರೇಶ್ ಹೊಡೆದಾಟಕ್ಕೆ ಮುಂದಾದ ಪ್ರಸಂಗ ನಡೆಯಿತು.

ವೇದಿಕೆಗೆ ಅಶ್ವತ್ಥ ನಾರಾಯಣರ ಮಾತಿನಿಂದ ಸಿಟ್ಟಾದ ಡಿ ಕೆ ಸುರೇಶ್ ಅವರತ್ತ ನುಗ್ಗಿದರು ಆತ ಅಶ್ವತ್ ನಾರಾಯಣ್ ಸಹ ಕೆರಳಿದರು ನಂತರ ಇಬ್ಬರೂ ಕೈಕೈ ಮಿಲಾಯಿಸಲು ಮುಂದಾದರು ವಿಧಾನ ಪರಿಷತ್ ಸದಸ್ಯ ಎಸ್ ರವಿ ಮೈಕ್ ನಲ್ಲಿ ಮಾತನಾಡಲು ಮುಂದಾದರು ಆಗ ಇದಕ್ಕೆ ಅಶ್ವತ್ಥ್ ನಾರಾಯಣ್ ಅವಕಾಶ ಕೊಡದೇ ಇದ್ದಾಗ ಮೈಕ್ ನ್ನು ಕಿತ್ತು ಎಸೆದರು ಇದರಿಂದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತೆರಳಿತ್ತು.

ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ ನಾರಾಯಣ್ ಇವತ್ತು ಏನು ತಪ್ಪಾಗಿದೆ ಎಂದು 4ಜನರನ್ನು ಸೇರಿಸಿ ಘೋಷಣೆ ಕೂಗುತ್ತಿರುವ ನೀನು ಯಾರ ಜೆಮಿನಿ ಕೈಹಾಕಿಲ್ಲ ಯಾವನೋ ಅವನು ಗಂಡಸು ಅನ್ನೋನು ಎಂದು ಎಂದು ಮಾತನಾಡಿದರು ಇದಕ್ಕೆ ಕೆರಳಿದ ಸುರೇಶ್ ತನ್ನ ರನ್ನ ಗಂಡುಸುತನ ತೋರಿಸಲಾ ಎಂದು ಅಶ್ವತ್ಥ ನಾರಾಯಣರತ್ತ ನುಗ್ಗಿದರು ಇದರಿಂದ ಗಲಾಟೆ ಜೋರಾಯಿತು ಬಳಿಕ ಸುರೇಶ್ ವೇದಿಕೆ ಮೇಲೆ ಧರಣಿ ಕೂತರು.

ನಂತರ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನವನ್ನು ಮಾಡಿದರು ರಾಜಕೀಯ ಮಾಡದೇ ಜನಪರವಾಗಿ ಕೆಲಸ ಮಾಡಬೇಕೆ ಹೊರತು ಭಿನ್ನಾಭಿಪ್ರಾಯವನ್ನು ದೊಡ್ಡದು ಮಾಡಬಾರದು ಎಂದು ಇಬ್ಬರಿಗೂ ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *

error: Content is protected !!