ಅಜೆಕಾರು: ವಿಪರೀತ ಮದ್ಯಪಾನ ಸೇವಿಸಿ ಅನಾರೋಗ್ಯಗೊಂಡ ವ್ಯಕ್ತಿ ಸಾವು
ಅಜೆಕಾರು ನ.3 (ಉಡುಪಿ ಟೈಮ್ಸ್ ವರದಿ) : ವಿಪರೀತ ಮದ್ಯಪಾನದಿಂದ ಅನಾರೋಗ್ಯಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅಂಡಾರು ಗ್ರಾಮದ ಕೊಡಮಣಿತ್ತಾಯ ದೇವಸ್ಥಾನದ ಪಕ್ಕದಲ್ಲಿ ನಡೆದಿದೆ. ಹೆಬ್ರಿ ತಾಲೂಕಿನ ಅಂಡಾರು ಗ್ರಾಮದ ಶ್ರೀರಾಮ ಗುಡ್ಡೆ ಎಂಬಲ್ಲಿನ ಹರೀಶ್ ನಾಯಕ್ (50) ಮೃತಪಟ್ಟವರು.
ಇವರು ಕಳೆದ ಹಲವು ವರ್ಷಗಳಿಂದ ವಿಪರೀತ ಮಧ್ಯಪಾನ ಮಾಡುವ ಅಭ್ಯಾಸಹೊಂದಿದ್ದರು. ನ.2 ರಂದು ವಿಪರೀತ ಕುಡಿದು ಅಸ್ವಸ್ಥಗೊಂಡಿದ್ದ ಇವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ವತ್ರೆಗೆ ದಾಖಲಿಸಲು ಕರೆದುಕೊಂಡುಹೋಗಿದ್ದು, ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅದರಂತೆ ವಿಪರೀತ ಮದ್ಯಪಾನ ಮಾಡಿ ಆರೋಗ್ಯದಲ್ಲಿ ಯಾವುದೋ ತೊಂದರೆಯಾಗಿ ಮೃತಪಟ್ಟಿರುವುದಾಗಿ ಮೃತರ ತಮ್ಮ ದೇವೆಂದ್ರ ನಾಯಕ್ ಅವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.