ಮಂಗಳೂರು:ನಗರದ ಹಲವೆಡೆ ನಡೆದ ದರೋಡೆ ಪ್ರಕರಣ, 7 ಆರೋಪಿಗಳ ಬಂಧನ

ಮಂಗಳೂರು ನ.2(ಉಡುಪಿ ಟೈಮ್ಸ್ ವರದಿ) : ನಗರದ ಹಲವೆಡೆ ನಡೆದ ದರೋಡೆ, ಸರಗಳ್ಳತನ, ದ್ವಿಚಕ್ರ ವಾಹನ ಕಳವು ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಸೇರಿದಂತೆ 24 ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಪ್ರಕರಣಕ್ಕೆ ಸಂಬಂಧಿಸಿ ಚೊಕ್ಕಬೆಟ್ಟುವಿನ ಅರ್ಷದ್ (42), ಪಂಜಿಮೊಗರು ನಿವಾಸಿ ಸಫ್ವಾನ್ (29), ಕಾವೂರಿನ ಮಹಮ್ಮದ್ ತೌಸಿಫ್ (30), ಶಾಂತಿನಗರದ ಅಬ್ದುಲ್ ಖಾದರ್ ಸಿನಾನ್ (30), ಕುಂದಾಪುರದ ಕುಂಬಾಶಿಯ ಮೊಹಮ್ಮದ್ ರೆಹಮಾನ್ (23), ಕಾವೂರು ನಿವಾಸಿ ಅಬ್ದುಲ್ ಇಶಾಮ್ (26), ಮಲ್ಲೂರಿನ ಮಹಮ್ಮದ್ ಫಜಲ್ (32) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ 10 ಲಕ್ಷ ಮೌಲ್ಯದ 210 ಗ್ರಾಂ ತೂಕದ ಚಿನ್ನದ ಸರ, ಕರಿಮಣಿ ಸರಗಳನ್ನು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿರುವ ಚಿನ್ನಾಭರಣಗಳನ್ನು ಹಾಗೂ 5 ಕ್ಕೂ ಹೆಚ್ಚು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲು ಬಾಕಿಯಿದೆ.

ಬಂಧಿತ ಆರೋಪಿಗಳ ವಿರುದ್ಧ ಬಜ್ಪೆ, ಬಂದರು ಹಾಗೂ ಬರ್ಕೆ ಠಾಣೆಯಲ್ಲಿ ತಲಾ 1 ಸರಗಳ್ಳತನ ಪ್ರಕರಣ, ಕಾವೂರು ಠಾಣೆಯಲ್ಲಿ 4 ಸರಗಳ್ಳತನ ಪ್ರಕರಣ, ಮಂಗಳೂರು ಉತ್ತರ, ಉರ್ವ ಹಾಗೂ ಮಂಗಳೂರು ಪೂರ್ವ, ಮಂಗಳೂರು ಟೌನ್ ಮತ್ತು ಉಳ್ಳಾಲ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ, ಬೈಕ್ ಕಳ್ಳತನ, ದರೋಡೆ ಪ್ರಕರಣ, ಪೆÇಲೀಸ್ ಮೇಲೆ ಹಲ್ಲೆ ಸೇರಿದಂತೆ 24 ಪ್ರಕರಣಗಳು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರು ವಿಶೇಷ ಪೊಲೀಸ್ ತಂಡ ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!