ಮಂಗಳೂರು: ಕಂಬಳ ವೇಳಾಪಟ್ಟಿ ಅಂತಿಮ
ಮಂಗಳೂರು (ಉಡುಪಿ ಟೈಮ್ಸ್ ವರದಿ) : ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ.27 ರಿಂದ 2022 ರ ಮಾ.26 ರ ವರೆಗೆ ನಡೆಯಲಿದೆ. 2021-22ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ 19 ಕಂಬಳಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ದ.ಕ ಜಿಲ್ಲಾ ಕಂಬಳ ಸಮಿತಿಯು ಪ್ರಕಟಿಸಿದೆ.ಅದರಂತೆ ಇದೇ ನ. 27 ರಿಂದ ದ.ಕ ಜಿಲ್ಲೆಯಲ್ಲಿ ಕಂಬಳ ಪ್ರಾರಂಭ ಗೊಳ್ಳಲಿದ್ದು, ನ. 27 ರಂದು ಮೂಡಬಿದಿರೆ, ಡಿ. 5 ರಂದು ಹೊಕ್ಕಾಡಿಗೋಳಿ, ಡಿ. 11 ರಂದು ಸುರತ್ಕಲ್, ಡಿ. 18 ರಂದು ಮಿಯ್ಯಾರು ಹಾಗೂ ಡಿ.19 ರಂದು ಬಳ್ಳಮಂಜ ಮತ್ತು ಡಿ. 26 ರಂದು ಮೂಲ್ಕಿ ಅರಸು ಕಂಬಳ ನಡೆಯಲಿದೆ.
ಇದರೊಂದಿಗೆ 2022 ರ ಜ.1 ರಂದು ಕಕ್ಕೆ ಪದವು, ಜ.8 ರಂದು ಅಡ್ವೆ ನಂದಿಕೂರು, ಜ. 15 ರಂದು ಪುತ್ತೂರು, ಜ. 22 ರಂದು ಮಂಗಳೂರು, ಜ. 29 ರಂದು ಐಕಳ ಬಾವ, ಫೆ. 5 ರಂದು ಬಾರಾಡಿ ಬೀಡು, ಫೆ. 13 ರಂದು ಜಪ್ಪಿನಮೊಗರು, ಫೆ. 19 ರಂದು ವಾಮಂಜೂರು, ಫೆ. 26 ರಂದು ಪೈವಳಿಕೆ ಹಾಗೂ ಮಾ. 5 ರಂದು ವೇಣೂರು, ಮಾ. 12 ರಂದು ಉಪ್ಪಿನಂಗಡಿ,ಮಾ. 19 ರಂದು ಕಟಪಾಡಿ ಮತ್ತುಮಾ. 26 ರಂದು ಬಂಗಾಡಿಯಲ್ಲಿ ಕಂಬಳ ನಡೆಯಲಿದೆ ಎಂದು ತಿಳಿದು ಬಂದಿದೆ.