ಮಣಿಪಾಲ: ಮಾಧವ ಕೃಪಾ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ಮಣಿಪಾಲ ನ.2 (ಉಡುಪಿ ಟೈಮ್ಸ್ ವರದಿ) : ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ದೀಪ ಬೆಳಗಿಸಿ ನಾಡದೇವತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಶಾಲಾ ಸಂಚಾಲಕರಾದ ಪಿ. ಜಿ. ಪಂಡಿತ್, ಮುಖ್ಯ ಅತಿಥಿ ಸುಧೀಂದ್ರ ಐತಾಳ್, ಉಪಪ್ರಾಂಶುಪಾಲೆಯರಾದ ಶಕಿಲಾಕ್ಷಿ ಕೃಷ್ಣ, ಜ್ಯೋತಿ ಸಂತೋಷ್, ಮುಖ್ಯೋಪಾಧ್ಯಾಯಿನಿ ಆಶಾ ನಾಯಕ್ ಅಮ್ಮುಂಜೆಯವರು ದೀಪ ಬೆಳಗಿಸಿ ನಾಡದೇವತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಧೀಂದ್ರ ಐತಾಳ್ ರವರು ಕನ್ನಡ ಭಾಷೆಯ ಮತ್ತು ರಾಜ್ಯೋತ್ಸವ ಆಚರಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಶಾಲಾ ಸಂಚಾಲಕರಾದ ಪಿ. ಜಿ. ಪಂಡಿತ್ ರವರು ರಾಜ್ಯೋತ್ಸವದ ಶುಭಾಷಯ ಸಲ್ಲಿಸಿದರು. ಬಳಿಕ ಕಾರ್ಯಕ್ರಮದಲ್ಲಿ ನಾಡಗೀತೆಗಳನ್ನು ಹಾಡಲಾಯಿತು.
ಈ ಸಂದರ್ಭ ಕಾರ್ಯಕ್ರಮಲ್ಲಿ ಶಾಲಾ ಶಿಕ್ಷಕಿಯರಾದ ನಾಗಶ್ರೀ, ರಾಧಿಕಾ ಪಾಟೀಲ್, ಶಾಂತಿ ಕೆ. ನಾಯಕ್ ಎ., ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು.