ಕೋಟ: ಜೈ ಕುಂದಾಪ್ರ ಸೇವಾ ಟ್ರಸ್ಟ್ ಅಶಕ್ತರಿಗೆ ಸಹಾಯಹಸ್ತ,ಅಭಿನಂದನಾ ಕಾರ್ಯಕ್ರಮ
ಕೋಟ(ಉಡುಪಿ ಟೈಮ್ಸ್ ವರದಿ ): ಜೈ ಕುಂದಾಪ್ರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಅಶಕ್ತರಿಗೆ ಸಹಾಯನಿಧಿ ವಿತರಣೆ,ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಭಾನುವಾರ ಕೋಟದ ಶ್ರೀ ದೇವಿ ಕಿರಣ್ ಕಾಂಪ್ಲೆಕ್ಸ್‌ನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ,ಹಾಗೂ ಜೈ ಕುಂದಾಪ್ರ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಉದ್ಘಾಟಿಸಿ ಮಾತನಾಡಿ ಕೂಡಿ ಇಟ್ಟ ಹಣಕ್ಕೂ ಬೇಡಿ ಸಹಾಯ ಮಾಡುವ ಹಣಕ್ಕೂ ಬಾರಿ ಅಜಗಜಾಂತರ ವ್ಯತ್ಯಾಸಗಳಿವೆ.ಹಣ ಇಲ್ಲದೆ ಹನಿ ಹನಿ ಕೂಡಿಸಿ ಸಹಾಯಹಸ್ತ ನೀಡುವ ಮನಸ್ಥಿತಿ ಎಲ್ಲವುದಕ್ಕಿಂತ ಶ್ರೇಷ್ಠವಾದದ್ದು,ಯುವ ಸಮೂಹ ಸಮಾಜಮುಖಿ ಕಾರ್ಯದಲ್ಲಿ ನಿರತ ಗಾಗುತ್ತಿರುವುದು ಪ್ರಶಂಸನೀಯ ಎಂದರು. ಇನ್ನು ಒಂದು ಹೆಜ್ಕೆ ಮುಂದೆ ಇರಿಸಿ ಉದ್ಯೋಗ ನೀಡುವ ಕಾಯಕದಲ್ಲಿ ತೋಡಗಿಕೊಳ್ಳಿ ಇದರಿಂದ ನಿರುದ್ಯೋಗಿ ಸಮಸ್ಯೆ ಬಗೆಹರಿಯುತ್ತದೆ.
ಈ ಕಾರ್ಯದಲ್ಲಿ ನಾನು ಸದಾ ನಿಮ್ಮ ಜೊತೆ ಕೈಜೋಡಿಸುತ್ತೇನೆ.ಬರೇ ವಿದ್ಯೆ ಇದ್ದರೆ ಸಾಲದು ಅದರ ಜೊತೆಗೆ ಛಲ ಇರಬೇಕು,ಆ ಮೂಲಕ ನಮ್ಮ ಉನ್ನತಿಕರಣಗೊಳಿಸಿಕೊಂಡು ಸಮಾಜದ ಋಣ ತಿರಿಸುವ ಕೆಲಸ ಮಾಡಬೇಕು,ಈ ವ್ಯವಸ್ಥೆಯಲ್ಲಿ ಸರ್ವಶ್ರೇಷ್ಠ ಯಾವುದು ಕೇಳಿದರೆ ಅದು ದಾನ ಮಾಡುವ ಮನಸ್ಥಿತಿ ಇದನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಆಗ ಮಾತ್ರ ತಮ್ಮ ಜೀವನದಲ್ಲಿ ಸಾರ್ಥಕ್ಯ ಕಾಣಬಹುದಾಗಿದೆ.ನಾವು ಮೊಟ್ಟ ಮೊದಲು ಮಾಡಬೇಕಾದ ಕೆಲಸ ಏನೆಂದರೆ ಅದು ಬಡವರ ಕಣ್ಣಿರೊರೆಸುವ ಕಾಯಕ ಆ ಮೂಲಕ ದೇವರನ್ನು ಕಾಣಲು ಸಾಧ್ಯವಿದೆ.
ಬೈಂದೂರಿನಲ್ಲಿ ಉದ್ಯೋಗ,ಗೋಶಾಲೆ ನಿರ್ಮಾಣ
ನನ್ನ ಕನಸು ಏನು ಕೇಳಿದರು ಅದು ಈ ಭಾಗದ ಪ್ರತಿಯೊರ್ವರಿಗೂ ಉದ್ಯೋಗ ನೀಡುವ ಮನೋಭಿಲಾಷೆ ಹೊಂದಿದ್ದಲ್ಲದೆ ಬೈಂದೂರು ಭಾಗದಲ್ಲಿ ಗೋ ಶಾಲೆ ನಿರ್ಮಾಣ ಕನಸು ಹೊತ್ತಿದ್ದೇನೆ ಸಾಕಾರಗೊಳಿದಲು ಎಲ್ಲಾ ರೀತಿ ಕಾರ್ಯಗಳು ಸಿದ್ಧಗೊಂಡಿದೆ ಎಂದು ಸಭೆಯಲ್ಲಿ ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪುಂಡಲೀಕ ಮೊಗವೀರ ತೆಕ್ಕಟ್ಟೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಶಕ್ತರ ಪಾಲಿನ ಆಶಾಕಿರಣ ಮುಂಬೈ ಉದ್ಯಮಿ ಗೋವಿಂದ ಬಾಬು ಪೂಜಾರಿ ಹಾಗೂ ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಇವರುಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಮಾಜ ಸೇವೆಯ ಭಾಗವಾಗಿ ಅನಾಥಾಶ್ರಮವನ್ನು ನಡೆಸುತ್ತಿರುವ ಬ್ರಹ್ಮಾವರದ ಅಪ್ಪ ಅಮ್ಮಾ ಅನಾಥಾಶ್ರಮದ ಮುಖ್ಯಸ್ಥ ಕೃಷ್ಣ ಪೂಜಾರಿ ಕೂರಾಡಿ ಹಾಗೂ ಸ್ಪಂದನಾ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥ ಜನಾರ್ದನ ಎಸ್ ಇವರುಗಳನ್ನು ಅಭಿನಂದಿಸಲಾಯಿತು.
ಕೊರೋನಾ ಸಂಕಷ್ಟಕಾಲದಲ್ಲಿ ಸಾಮಾಜಿಕ ಕೈಂಕರ್ಯದಲ್ಲಿ ತೋಡಗಿಕೊಂಡ ಸುಮಾರು 20 ಕ್ಕೂ ಅಧಿಕ ಮಂದಿ ಸಮಾಜಸೇವಕರನ್ನು ಗೌರವಿಸಲಾಯಿತು. ಸಂಸ್ಥೆಯ ವತಿಯಿಂದ ಅಶಕ್ತರಿಗೆ ಸಹಾಯಹಸ್ತ,ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಎಸ್ ಎಸ್ ಎಲ್ ಸಿ ರ್‍ಯಾಂಕ್ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಹಸ್ತಾಂತರಿಸಿ ಗೌರವಿಸಲಾಯಿತು. ಕೋವಿಡ್ ಸಂದರ್ಭದಲ್ಲಿ ದುಡಿದ ಸಂಸ್ಥೆಯ ಪದಾಧಿಕಾರಿಗಳಿಗೆ ಹಾಗೂ ಸದಸ್ಯರುಗಳನ್ನು ವಿಶೇಷವಾಗಿ ಗೌರವಿಸಲಾಯಿತು.ಇದೇ ವೇಳೆ ಮ್ಯಾಕ್ಸ್ ಲೈಫ್ ಇನ್ಯ್ಷುರೇನ್ಸ್ ಕೊಡಮಾಡಿದ ಕೊರೋನಾ ವಾರಿಯರ್ಸ್ ಪ್ರಮಾಣಪತ್ರವನ್ನು ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಪ್ರತಾಪ್ ಕುಂದಾಪುರ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘ ಕೋಟೇಶ್ವರ ಘಟಕದ ಅಧ್ಯಕ್ಷ ಸುನೀಲ್ ಜಿ ನಾಯ್ಕ್ ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಜೈ ಕುಂದಾಪ್ರ ಸೇವಾ ಟ್ರಸ್ಟ್ ಗೌರವ ಸಲಹೆಗಾರರಾದ ದಿನೇಶ್ ಗಾಣಿಗ ಕೋಟ,ಆದಿತ್ಯ ಕೋಟ,ವಿಕ್ಕಿ ಮೊಬೈಲ್ ನ ಮಾಲಕರಾದ ವಿವೇಕ್ ಜಿ ಸುವರ್ಣ,ಜೈ ಕುಂದಾಪ್ರ ಸೇವಾ ಟ್ರಸ್ಟ್ ಪ್ರದಾನಕಾರ್ಯದರ್ಶಿ ಜಯರಾಜ್ ಸಾಲಿಯಾನ್ ,ಡಾ.ವಾಣಿಶ್ರೀ ಐತಾಳ್ , ಜೈ ಕುಂದಾಪುರ ಟ್ರಸ್ಟ್ ಮಹಿಳಾ ಅಧ್ಯಕ್ಷೆ ಸೌಮ್ಯ ಸಹನಾ ಮತ್ತಿತರರು ಉಪಸ್ಥಿತರಿದ್ದರು.
ಜೈ ಕುಂದಾಪ್ರ ಸೇವಾ ಟ್ರಸ್ಟ್ ನ ಉಪಾಧ್ಯಕ್ಷ ಜಗನಾಥ್ ಕುಂದಾಪುರ ಪ್ರಾಸ್ತಾವನೆ ಸಲ್ಲಿಸಿದರು. ಮಹಿಳಾ ಘಟಕದ ಕೀರ್ತನಾ ಬ್ರಹ್ಮಾವರ ಸ್ವಾಗತಿಸಿದರು.ಶಿಕ್ಷಕ ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.