ಶಾಲಾ ದೇಗುಲದಲ್ಲಿ ಮತ್ತೇ ಪ್ರತಿಧ್ವನಿಸುತ್ತಿದ್ದೆ ಚಿಣ್ಣರ ಚಿಲಿಪಿಲಿ

ಬೆಂಗಳೂರು, ಅ.25 : ರಾಜ್ಯಾದ್ಯಂತ ಶಾಲೆಗಳಲ್ಲಿ ಇಂದು 1 ರಿಂದ 5 ನೇ ತರಗತಿಗಳು ಆರಂಭಗೊಂಡಿದ್ದು ಒಂದುವರೆ ವರ್ಷದ ಬಳಿಕ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ.

ಕರಾವಳಿಯ ಉಡುಪಿ ಜಿಲ್ಲೆಯಲ್ಲಿಯೂ ಮುಂಜಾಗೃತಾ ಕ್ರಮದೊಂದಿಗೆ ಶಾಲೆಗಳು ಆರಂಭಗೊಂಡಿದ್ದು, ಕೋವಿಡ್ ಭೀತಿಯಿಂದ ಮುಚ್ಚಿದ್ದ ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಹಾಜರಾಗಿದ್ದು, ವರುಷಗಳ ಬಳಿಕ ಮಕ್ಕಳು ಶಾಲೆಯಲ್ಲಿ ಶಿಕ್ಷಕರೊಂದಿಗೆ ಆಟ ಪಾಟಗಳೊಂದಿಗೆ ಸಂಭ್ರಮದಿಂದ ಹಾಡಿ ನಕ್ಕು ನಲಿದರು.

ಪ್ರಾಥಮಿಕ ಶಾಲೆಯ ಆರಂಭದ ಹಿನ್ನೆಲೆ ಉಡುಪಿ ಜಿಲ್ಲೆಯ ಡಿಡಿಪಿಐ ಎನ್.ಎಚ್ ನಾಗೂರ ಅವರು ಒಳಕಾಡು ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಮಕ್ಕಳೊಂದಿಗೆ ಮಾತನಾಡಿದ ಅವರು ಮಕ್ಕಳಿಗೆ ಕೋವಿಡ್ ನಿಯಮಗಳನ್ನು ಪಾಲಿಸುವ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಮಾತನಾಡಿದ ಅವರು, ಶಾಲೆಯಲ್ಲಿ ಮಕ್ಕಳ ಜೊತೆ ಮಾತನಾಡಿದಾಗ ಮಕ್ಕಳಲ್ಲಿ ಕಲಿಯುವ ಹಂಬಲ ವಿದೆ ಎಂಬೂದು ಗೊತ್ತಾಗಿದೆ. ಮಕ್ಕಳು ಖುಷಿಯಿಂದ ಶಾಲೆಗೆ ಬಂದಿದ್ದಾರೆ. ಜಿಲ್ಲೆಯಲ್ಲಿ 220 ಸರಕಾರಿ ಪ್ರೌಢ ಶಾಲೆಗಳು, 6 ಅನುದಾನಿತ ಶಾಲೆಗಳು ಹಾಗೂ 14 ಅನುದಾನ ರಹಿತ ಶಾಲೆಗಳು ಮತ್ತು ಕಿರಿಯ ಪ್ರಥಮಿಕ ಶಾಲೆಗಳು ಸೇರಿ ಒಟ್ಟು 249 ಶಾಲೆಗಳು ಆರಂಭಗೊಂಡಿದೆ. ಹಾಗೂ ಮಕ್ಕಳ ಶಾಲೆ ಹಾಜರಾತಿ ವಿಚಾರವಾಗಿ ಬೇರೆ ಬೇರೆ ತಾಲೂಕುಗಳಿಂದಲೂ ವರದಿ ಪಡೆಯುವುದಾಗಿ ತಿಳಿಸಿದರು.
ಇದೇ ವೇಳೆ ಶಾಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ಸದ್ಯ ಅರ್ಧ ದಿನ ಶಾಲೆಗಳು ನಡೆಯುತ್ತಿದ್ದು, ನ.2 ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಆರಂಭ ಗೊಳ್ಳಲಿದೆ. ಮಕ್ಕಳ ಪಾಲಕರೂ ಮಕ್ಕಳನ್ನು ಶಾಲೆಗೆ ಕಳುಹಿಸುವುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಶಾಲೆ ಮುಖ್ಯಶಿಕ್ಷಕಿಯೊಬ್ಬರು ಮಾತನಾಡಿ, ಸರಕಾರದ ಆದೇಶದ ಪ್ರಕಾರ ಎಚ್ಚರ ವಹಿಸಿಕೊಂಡು ತರಗತಿಗಳನ್ನು ಯಾವುದೇ ತೊಂದರೆ ಇಲ್ಲದೆ ನಡೆಸುತ್ತಿದ್ದೇವೆ. ನ.2 ರಿಂದ ಆರಂಭಗೊಳ್ಳಲಿರುವ ಪೂರ್ಣ ಪ್ರಮಾಣದ ತರಗತಿಗಳಿಗೂ ಈ ಶಾಲೆಯಲ್ಲಿ ಶಿಕ್ಷಕರು ಸಿದ್ದರಿರುವುದಾಗಿ ತಿಳಿಸಿದರು.

ಇನ್ನು ಇದೇ ವೇಳೆ ಮಕ್ಕಳ ಪೋಷಕರು ಕೂಡಾ ಮಕ್ಕಳನ್ನು ಶಾಲೆಗೆ ಕಳುಹಿಸಲು ಉತ್ಸುಕರಾಗಿದ್ದಾರೆ. ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಮಕ್ಕಳನ್ನು ನಿರ್ಭೀತಿಯಿಂದ ಶಾಲೆಗೆ ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ.

ಇನ್ನು ಕೋವಿಡ್ ಪಾಸಿಟಿವ್ ಪ್ರಕರಣಗಳು ಕ್ರಮೇಣ ಇಳಿಮುಖವಾಗುತ್ತಿವೆಯಾದರೂ ಸೋಂಕನ್ನು ನಿರ್ಲಕ್ಷಿಸುವಂತಿಲ್ಲ. ಆದ್ದರಿಂದ ಶಾಲೆಗೆ ಹಾಜರಾಗುವ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಸರಕಾರ ಕೆಲವೊಂದು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ ಅದರಂತೆ ಸರ್ಕಾರ ಆದೇಶದ ಪ್ರಕಾರ ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಬೇಕು. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ತೆರೆಯಬೇಕು. ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಸ್ವಚ್ಛತಾ ಕಾರ್ಯ, ಸ್ಯಾನಿಟೈಸರ್‍ಗೆ ಅವಕಾಶ ನೀಡಬೇಕು.

ಇನ್ನು ಮಕ್ಕಳಿಗೆ ಒಂದು ದಿನ ತರಗತಿ ಒಂದು ದಿನ ರಜೆ ನೀಡಲಾಗಿದ್ದು, ಮಕ್ಕಳು ಶಾಲೆಗೆ ಹಾಜರಾಗಲು ಪೆÇೀಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿ ಬೇಕು. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಯ ಕೊರೊನಾ ಸೋಂಕು ಇಲ್ಲ ಎಂದು ಪೆÇೀಷಕರು ದೃಢೀಕರಿಸಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.

ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ತರಗತಿಗೂ ಅವಕಾಶ ನೀಡಲಾಗಿದ್ದು, ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ತರಗತಿಗಳು ನಡೆಯಲಿದ್ದು, ನವೆಂಬರ್ ಎರಡರಿಂದ ಶನಿವಾರ ಬೆಳಗ್ಗೆ 8 ರಿಂದ 11.40 ರ ವರೆಗೆ ಮಾತ್ರ ತರಗತಿ ನಡೆಯುತ್ತದೆ ಎಂದು ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!