ಮಂಗಳೂರು: ಫ್ಲ್ಯಾಟ್ ಮಾರಾಟ ವಿಚಾರದಲ್ಲಿ ವಿಚಾರದಲ್ಲಿ ಮಹಿಳೆಯಿಂದ ವಂಚನೆ ಪ್ರಕರಣ ದಾಖಲು

ಮಂಗಳೂರು ಅ.22 (ಉಡುಪಿ ಟೈಮ್ಸ್ ವರದಿ) : ಫ್ಲ್ಯಾಟ್ ಮಾರಾಟ ವಿಚಾರದಲ್ಲಿ ಮಹಿಳೆಯೊಬ್ಬರನ್ನು ಇಬ್ಬರು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

2016 ರಲ್ಲಿ ಪ್ರೆಸಿಲ್ಲಾ ಡಿಸೋಜ ಎಂಬವರು ಪ್ರಶಾಂತ್ ರಸ್ಕಿನಾ ಮತ್ತು ಜೋಯ್ಸಿ ರಸ್ಕಿನಾ ಎಂಬವರ ವಸತಿಗೃಹ ಕಟ್ಟಡದಲ್ಲಿ 250 ಚದರ ಅಡಿ ಮತ್ತು 710 ಚದರ ಅಡಿ ಫ್ಲಾಟ್ ಖರೀದಿಸಲು 32 ಲಕ್ಷ ರೂ. ಪಾವತಿಸಿದ್ದರು. ಇದರಲ್ಲಿ 250 ಚದರ ಅಡಿ ಪ್ರೆಸಿಲ್ಲಾ ಅವರ ಹೆಸರಿಗೆ ನೋಂದಣಿಯಾಗಿದ್ದು, ಇನ್ನೊಂದು ಫ್ಲಾಟ್‍ನ್ನು ಆರೋಪಿಗಳಾದ ಪ್ರಶಾಂತ್ ಮತ್ತು ಜ್ಯೋಯ್ಸೋ ರಸ್ಕಿನಾ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ

Leave a Reply

Your email address will not be published. Required fields are marked *

error: Content is protected !!