ವಾಷಿಂಗ್ಟನ್: ಹಂದಿಯ ಮೂತ್ರಪಿಂಡ ಮನುಷ್ಯನಿಗೆ ತಾತ್ಕಾಲಿಕ ಜೋಡಣೆ ಶಸ್ತಚಿಕಿತ್ಸೆ ಯಶಸ್ವಿ
ವಾಷಿಂಗ್ಟನ್ ಅ.21 : ವೈದ್ಯಕೀಯ ಕ್ಷೇತ್ರದಲ್ಲಿ ಒಂದಲ್ಲ ಒಂದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುತ್ತದೆ. ಇದೀಗ ಅಮೇರಿಕಾದ ವೈದ್ಯರ ತಂಡ ಹಂದಿಯ ಮೂತ್ರಪಿಂಡವನ್ನು ಮನುಷ್ಯನಿಗೆ ತಾತ್ಕಾಲಿಕವಾಗಿ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಸೆ.25 ರಂದು ಈ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಕುಲಾಂತರಿ ದಾನಿ ಪ್ರಾಣಿ ಮತ್ತು ವೆಂಟಿಲೇಟರ್ ಬೆಂಬಲದಲ್ಲಿದ್ದ ಮೆದುಳು ನಿಷ್ಕ್ರಿಯಗೊಂಡ ರೋಗಿಯ ಮೇಲೆ ಈ ಪರೀಕ್ಷೆ ಮಾಡಲಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮೋಂಟ್ ಗೊಮೆರಿ ಮತ್ತು ಅವರ ತಂಡ ನೆರವೇರಿಸಿತು.
ಕಸಿ ಮಾಡಲ್ಪಟ್ಟ ಮೂತ್ರಪಿಂಡ ತ್ಯಾಜ್ಯವನ್ನು ಹೊರತೆಗೆದು ಮೂತ್ರ ಉತ್ಪತ್ತಿ ಮಾಡುತ್ತಿದೆ” ಹಾಗೂ ಇವರು ಮೂತ್ರಪಿಂಡವನ್ನು ರೋಗಿಯ ಕಾಲಿನ ರಕ್ತನಾಳಗಳಿಗೆ ಜೋಡಿಸಿದ್ದು, ಇದರಿಂದಾಗಿ ತಪಾಸಣೆ ಮತ್ತು ಬಯಾಪ್ಸಿ ಮಾದರಿ ಪಡೆಯಲು ಸುಲಭವಾಗಲಿದೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಕಸಿ ಸಂಸ್ಥೆಯ ನಿರ್ದೇಶಕ ರಾಬರ್ಟ್ ಮೋಂಟ್ ಗೊಮೆರಿ ಎಎಫ್‍ಪಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
54 ಗಂಟೆಗಳ ಪರೀಕ್ಷೆ ಬಳಿಕ ರೋಗಿಯ ವೆಂಟಿಲೇಟರ್ ತೆರವುಗೊಳಿಸಲಾಗಿದ್ದು ರೋಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಮುನ್ನ ಹಂದಿ ಕಿಡ್ನಿ ಇತರ ಪ್ರಾಣಿಗಳಿಗೆ ಯೋಗ್ಯ ಎಂದು ಸಾಬೀತಾಗಿತ್ತು. ಆದರೆ ಮನುಷ್ಯನ ಮೇಲೆ ಮೊದಲ ಬಾರಿಗೆ ಈ ಪ್ರಯೋಗ ನಡೆದಿದೆ. ಈ ಮೂತ್ರಪಿಂಡ, ಕಿಡ್ನಿಯ ಆರೋಗ್ಯದ ಸೂಚಕ ಎನ್ನಲಾಗುವ ಕ್ರಿಯಾ ಟಿನೈನ್ ಕಣಗಳ ಮಟ್ಟವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ
ಈ ರೋಗಿ ಅಂಗಾಂಗ ದಾನ ಮಾಡಲು ಬಯಸಿದ್ದರು. ಆದರೆ ಅವರ ಅಂಗಾಂಗ ಹೊಂದಾಣಿಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಕುಟುಂಬಕ್ಕೆ ನಿರಾಶೆಯಾಗಿತ್ತು. ಬಳಿಕ ರೋಗಿಯ ಕುಟುಂಬದವರು ವಿಜ್ಞಾನದ ಮುನ್ನಡೆಯ ದೃಷ್ಟಿಯಿಂದ ಈ ಎರಡು ದಿನಗಳ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.