ಉಡುಪಿ ಮಠದ ಬೆಟ್ಟು ನಿವಾಸಿಗಳಿಗೆ ಕೊಳಚೆಯಿಂದ ಶಾಶ್ವತ ಮುಕ್ತಿ ಕೊಡಿ ಇದು ಸ್ಥಳೀಯರ ಆಗ್ರಹ
ಉಡುಪಿ (ಉಡುಪಿ ಟೈಮ್ಸ್ ವರದಿ): ಉಡುಪಿಯ ಕಲ್ಸಂಕ – ಅಂಬಾಗಿಲು ಮಠದ ಬೆಟ್ಟು 26 ನೇ ಕಡಿಯಾಳಿ ವಾರ್ಡ್ ವೆಟ್ ವೆಲ್ ರಸ್ತೆ ಪರಿಸರದಲ್ಲಿ ಕಳೆದ ಮೂರು ತಿಂಗಳನಿಂದ ಕಾಂಕ್ರೀಟ್ ಮಧ್ಯ ರಸ್ತೆಯಲ್ಲಿ ಡ್ರೈನೇಜ್ ಪೈಪ್ ಒಡೆದು ನೀರು ಹರಿಯುತ್ತಿದ್ದು ಸ್ಥಳೀಯರು ಮೂಗು ಮುಚ್ಚಿ ವಾಸಿಸುವಂಥ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಸ್ಥಳೀಯಾಡಳಿತದ ಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಸಮಸ್ಯೆ ಪರಿಹಾರಕ್ಕೆ ನಗರ ಸಭೆ ಅಧಿಕಾರಿಗಳಿಗೆ, ನಗರ ಸಭಾ ಸದಸ್ಯರಿಗೆ, ಸ್ಥಳೀಯ ಶಾಸಕರಿಗೆ ಈಗಾಗಲೇ ಸಾಕಷ್ಟು ಬಾರಿ ಅಗ್ರಹಿಸಿದರೂ ಈ ವರೆಗೆ ಯಾವುದೇ ಶಾಶ್ವತ ಪರಿಹಾರ ಕಂಡಿಲ್ಲಾ. ಈ ಹಿಂದೆ ನಿವಾಸಿಗಳು ಜಿಲ್ಲಾಧಿಕಾರಿ/ ಜಿಲ್ಲಾ ಅರೋಗ್ಯ ಅಧಿಕಾರಿಗಳ ಗಮನಕ್ಕೆ ನೂರಾರು ಬಾರಿ ತಂದರೂ ಈ ವರೆಗೆ ಯಾವುದೇ ಸ್ಪಂದನೇ ಇಲ್ಲದೇ ಇರುವುದು ದುರದೃಷ್ಟಕರ ಸ್ಥಳೀಯರು ದೂರುತ್ತಿದ್ದಾರೆ..
ಕರೋನ ದಂತಹ ಮಹಾಮಾರಿ ನಡುವೆ ಇನ್ನೊಂದು ಸಾಂಕ್ರಾಮಿಕ ರೋಗ ಈ ಪರಿಸರ, ಉಡುಪಿ ನಗರಕ್ಕೆ ಹರಡುವುದಕ್ಕಿಂತ ಮುಂಚೆ ಸೂಕ್ತ ಶಾಶ್ವತ ಪರಿಹಾರ ಬೇಕಾಗಿದೆ ಆಗ್ರಹಿಸಿದ್ದಾರೆ.