ಕೋಟೇಶ್ವರ : ಅಕ್ರಮ ಅಕ್ಕಿ ದಾಸ್ತಾನಿನ ಮೇಲೆ ಡಿಸಿಐಬಿ ಪೊಲೀಸ್ ದಾಳಿ

ಕುಂದಾಪುರ:( ಉಡುಪಿ ಟೈಮ್ಸ್ ವರದಿ): ಕುಂದಾಪುರದ ಸಮೀಪದ ಕೋಟೇಶ್ವರದ ಮೇಪು ಎಂಬಲ್ಲಿ ಸರಕಾರದ ಉಚಿತ ಅಕ್ಕಿಯನ್ನು ಸಂಗ್ರಹಿಸಿ ಅಕ್ರಮ ಕೇರಳಕ್ಕೆ ಸಾಗಿಸುತ್ತಿದ್ದ ತಂಡವನ್ನು ಡಿ ಸಿ ಐ ಬಿ ಪೊಲೀಸರು ಬಂಧಿಸಿದ್ದು, ಗೋದಾಮಿನಲ್ಲಿದ್ದ ಸುಮಾರು 55 ಟನ್ ನಷ್ಟು ಅಕ್ಕಿ ಯನ್ನು ವಶಕೆ ಪಡೆದು 8 ಮಂದಿಯನ್ನ ಬಂಧಿಸಿದ್ದಾರೆ.


ಖಚಿತ ಮಾಹಿತಿಯ ಮೇರೆಗೆ ಉಡುಪಿ ಜಿಲ್ಲಾ ಡಿ ಸಿ ಐ ಬಿ ಪೊಲೀಸ್ ಇನ್ಸೆಪೆಕ್ಟರ್ ಮಂಜಪ್ಪ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ವೇಳೆಯಲ್ಲಿ 8 ಜನರನ್ನು ಬಂಧಿಸಿದ್ದು ಇಬ್ಬರು ಓಡಿ ತಲೆಮರೆಸಿಕೊಂಡಿದ್ದಾರೆ ಎಂಬುದಾಗಿ ಬಲ್ಲ ಮೂಲಗಳು ತಿಳಿಸಿವೆ.

ಬಡವರಿಗಾಗಿ ಇರುವ ಉಚಿತ ಅಕ್ಕಿಯನ್ನ ದಂದೆಕೋರರು ಖರೀದಿಸಿ , ಮಾರಾಟ ಮಾಡಿ ದ್ರೋಹ ಬಗೆಯುತ್ತಿದ್ದಾರೆ. ಬಂಧಿತರಾದ ಇಸ್ಮಾಯಿಲ್ ಬ್ಯಾರಿ, ಮುಸ್ತಫಾ ತೌಫಿಕ್, ಉಬೇದುಲ್ಲಾ, ಮಹಮ್ಮದ್ ಮೇಚ್ರಾ, ನಿಯಾಸ್ ಸರ್ಕಾರದ ಫ್ರೀ ರೇಶನ್ ಅಕ್ಕಿಯನ್ನು ಒಟ್ಟು ಮಾಡುತ್ತಿದ್ದ


ಏನಿದು ದಂಧೆ ?: ಸರಕಾರದಿಂದ ಪಡಿತರ ಚೀಟಿಯ ಅಕ್ಕಿಯನ್ನ ಮನೆಗಳಿಂದ ಖರೀದಿಸಿ ಅದಕ್ಕೆ ಪಾಲಿಶ್ ಮಾಡಿ ಸೋನಾ ಮಸೂರಿ ಅಕ್ಕಿಯನ್ನಾಗಿಸಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದು ಇದು ದಾಳಿಯ ವೇಳೆ ಬೆಳಕಿಗೆ ಬಂದಿದೆ . ಇಂದು ನಡೆದ ಕಾರ್ಯಚರಣೆ ವೇಳೆಯಲ್ಲಿ ಸುಮಾರು 2 .50 ಲಕ್ಷ ನಗದು , ಸ್ಥಳದಲ್ಲಿದ್ದ ಮೂರು ಕಾರು, ಹಾಗು ಲಾರಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಸುಮಾರು 1 ಕೋಟಿ ಮೌಲ್ಯದ ಸೊತ್ತು ವಶ ಪಡಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯ ವಾಗಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!