ವರುಣಾರ್ಭಟಕ್ಕೆ ಉತ್ತರಖಂಡ್ ತತ್ತರ: ಸಾವಿನ ಸಂಖ್ಯೆ 52 ಕ್ಕೆ ಏರಿಕೆ
ನವದೆಹಲಿ, ಅ. 21 : ವರುಣಾರ್ಭಟಕ್ಕೆ ಉತ್ತರಖಂಡ್ ತತ್ತರಿಸಿ ಹೋಗಿದೆ. ಭೀಕರ ಮಳೆಯಿಂದ ಉಂಟಾಗಿರುವ ಪ್ರವಾಹ, ಭೂ ಕುಸಿತದಿಂದ ಉತ್ತರಖಂಡ್ ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ನಿನ್ನೆ ಮತ್ತೆ ಆರು ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 52 ಕ್ಕೆ ಏರಿಕೆಯಾಗಿದೆ.
ಕಳೆದ ಎರಡು ದಿನಗಳಿಂದ ಉತ್ತರ ಪ್ರದೇಶದ ಬರೇಲಿ ಮತ್ತು ಪಿಲಿಭಿತ್ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ನಿರಾಶ್ರಿತರಾಗಿದ್ದಾರೆ. ಇನ್ನೊಂದೆಡೆ ಜನರ ಸ್ಥಳಾಂತರ ಕಾರ್ಯವನ್ನು ಎನ್ ಡಿಆರ್ ಎಫ್ ಯೋಧರು ನಡೆಸುತ್ತಿದ್ದಾರೆ. ಅಪಾಯದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಉತ್ತರ ಪ್ರದೇಶ, ಸಿಕ್ಕಿಂ ಮತ್ತು ಉತ್ತರ ಬಂಗಾಳದ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿವಾಗಿದೆ. ಕೆಲವು ಕಡೆಗಳಲ್ಲಿ ಹೆದ್ದಾರಿಯಲ್ಲೂ ಕುಸಿತ ಸಂಭವಿಸಿದೆ. ಮುಂಜಾಗೃತಾ ಕ್ರಮವಾಗಿ ಗ್ಯಾಂಗ್ಟಾಕ್ ನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 10 ನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.