ಸಂಘಟನೆಗಳ ಮೂಲಕ ಸಮಾಜಕ್ಕೆ ತನ್ನನ್ನು ತಾನು ಅರ್ಪಿಸಿದಲ್ಲಿ ಯಶಸ್ಸು ಅರಸಿಕೊಂಡು ಬರುತ್ತದೆ -ನೃಸಿಂಹಾಶ್ರಮ ಸ್ವಾಮೀಜಿ

ಕೋಟ(ಉಡುಪಿ ಟೈಮ್ಸ್ ವರದಿ): ಸಂಘಟನೆಯಲ್ಲಿ ಶಕ್ತಿ ಇದೆ ಅವುಗಳು ಒಂದುಗೂಡಿ ಕಾರ್ಯನಿರ್ವಹಿಸಿದಾಗ ಶಕ್ತಿಯ ಪ್ರಕರತೆ ತೋರ್ಪಡಿಸುತ್ತದೆ ಎಂದು ಹಂಗಾರಕಟ್ಟೆಯ ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದ್ದಾರೆ.
ಕೋಟದ ಪಂಚವರ್ಣ ಯುವಕ ಮಂಡಲದ 24 ನೇ ವರ್ಷದ ಕನ್ನಡ ರಾಜ್ಯೋತ್ಸ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು ಸಂಘಟನೆಗಳ ಮೂಲಕ ಸಮಾಜಕ್ಕೆ ತನ್ನನ್ನು ತಾನು ಅರ್ಪಣೆಗೊಳಿಸಿಕೊಳ್ಳಬೇಕು,ತನ್ನ ಜೀವಿತ ಅವಧಿಯ ಸಂಪಾದನೆಯಲ್ಲಿ ಸಮಾಜಿಕ ಕಾರ್ಯಕ್ಕೆ ವಿನಿಯೋಗಿಸುವ ಧರ್ಮಯುಕ್ತ ಮನೋಭಾವನೆ ಬೆಳೆಸಿಕೊಂಡಾಗ ಪ್ರತಿಫಲ ನಮ್ಮನ್ನು ಅರಿಸಿಕೊಂಡು ಬರುತ್ತದೆ.

ಸಹಾಯ ಮಾಡುವ ಮನಸ್ಥಿತಿ ಎಲ್ಲವುದಕ್ಕಿಂದ ಶ್ರೇಷ್ಠವಾದದ್ದು ಅದನ್ನು ಬೆಳೆಸಿಕೊಳ್ಳವ ಮೂಲಕ ಸಮಾಜದ ಋಣವನ್ನು ತೀರಿಸಲು ಸಾಧ್ಯ, ಈ ನಿಟ್ಟಿನಲ್ಲಿ ಈ ಬಾರಿ ನೀವು ಆಯ್ಕೆಮಾಡಿಕೊಂಡ ವ್ಯಕ್ತಿ ಸಮಾಜಕ್ಕೆ ಅರ್ಪಣೆ ಮಾಡಿಕೊಂಡಿದ್ದಾನೆ ಇದು ಸಹ ಧನ್ಯತೆಯನ್ನು ಕಂಡಂತೆ ಅದು ನಿಮ್ಮ ಈ ಯುವಕ ಮಂಡಲದಿಂದ ಕಾಣಲು ಸಾಧ್ಯವಾಗಿ ಪರಿಸರಸ್ನೇಹಿಯಾಗಿ ಸಾಕಷ್ಟು ಸಾಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ನವ ಈ ಯುವಕ ಮಂಡಲ ಸಾಧನಾ ಶಿಖರವನ್ನು ಏರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಸಂಘ ಕಾರ್ಯಾತತ್ಪರತೆಯನ್ನು ಕೊಂಡಾಡಿದರು..

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ,ರಂಗಸಂಪದ ಬಳಗ ಕೋಟ ಇದರ ಅಧ್ಯಕ್ಷ ಕೆ.ರಾಘವೇಂದ್ರ ತುಂಗ,ಪಂಚವರ್ಣ ಯುವಕ ಮಂಡಲದ ಗೌರವ ಸಲಹಾ ಸಮಿತಿಯ ಸದಸ್ಯ ಕೆ.ಉಮೇಶ್ ಪ್ರಭು,ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಜಿತ್ ಆಚಾರ್ಯ, ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್ಯ, ಗಿಳಿಯಾರು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರು, ಪಂಚವರ್ಣ ಸ್ಥಾಪಕ ನರಸಿಂಹ ಗಾಣಿಗ, ಪ್ರಮುಖರಾದ ರವೀಂದ್ರ ಜೋಗಿ,ಸುಧೀರ್ ಕೊಯ್ಕೂರ್,ಕಾರ್ತಿಕ್ ಎನ್,ಭಾರ್ಗವ ಗಿಳಿಯಾರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

Leave a Reply

Your email address will not be published. Required fields are marked *

error: Content is protected !!