ಉಡುಪಿ :ಜಿಲ್ಲೆಯಲ್ಲಿ 69 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

ಉಡುಪಿ ಸೆ.23 (ಉಡುಪಿ ಟೈಮ್ಸ್ ವರದಿ) : ಜಿಲ್ಲೆಯಲ್ಲಿ ಕೋವಿಡ್ 2 ನೇ ಅಲೆ ಆರಂಭ ಆದಾಗಿನಿಂದ ಈ ವರೆಗಿನ ಕೊರೋನಾ ಅಂಕಿ ಅಂಶಗಳು ಹೀಗಿವೆ.

ಜಿಲ್ಲೆಯಲ್ಲಿ ಇಂದು 69 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಉಡುಪಿಯಲ್ಲಿ 43 , ಕುಂದಾಪುರದಲ್ಲಿ 8 , ಕಾರ್ಕಳದಲ್ಲಿ 17 ಹಾಗೂ ಹೊರ‌ ಜಿಲ್ಲೆಯ ಓರ್ವರಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 450 ಕೋವಿಡ್ ಸಕ್ರಿಯ ಪ್ರಕರಣಗಳಿವೆ.

ಇಂದು ಜಿಲ್ಲೆಯಲ್ಲಿ ಯಾರೂ ಕೂಡಾ ಕೋವಿಡ್ ನಿಂದ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ ಜಿಲ್ಲೆಯಲ್ಲಿ ಈ ವರೆಗೆ 2 ನೇ ಅಲೆಯಲ್ಲಿ ಒಟ್ಟು 281 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಸೆ.22 ರಂದು ಜಿಲ್ಲೆಯಲ್ಲಿ 147 ಮಂದಿ ಸೋಂಕಿತರು ಗುಣಮುಖರಾಗಿದ್ದು, ಕೋವಿಡ್ ಎರಡನೇ ಅಲೆ ಆರಂಭ ಆದಾಗಿನಿಂದ ಈವರೆಗೆ 51,634 ಮಂದಿ ಗುಣಮುಖರಾಗಿದ್ದಾರೆ ಹಾಗೂ ಜಿಲ್ಲೆಯಲ್ಲಿ ಒಟ್ಟು ಈವರೆಗೆ ಪತ್ತೆಯಾದ 75,976 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ 75,055 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೋವಿಡ್ 2 ನೇ ಅಲೆಯಲ್ಲಿ ಸೆ.22 ರ ವೇಳೆಗೆ ಜಿಲ್ಲೆಯಲ್ಲಿ 7,43,089 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 52,365 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ.

ಸದ್ಯ ಜಿಲ್ಲೆಯಲ್ಲಿ ಒಂದು ಬ್ಲ್ಯಾಕ್ ಫಂಗಸ್ ನ ಪ್ರಕರಣಗಳು ಸಕ್ರಿಯ ವಾಗಿದೆ. ಈ ವರೆಗೆ ಪತ್ತೆಯಾದ 53 ಬ್ಲ್ಯಾಕ್ ಫಂಗಸ್ ನ ಪ್ರಕರಣಗಳಲ್ಲಿ 46 ಮಂದಿ ಗುಣಮುಖರಾಗಿದ್ದು,6 ಮಂದಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!