ಅಮಾಸೆಬೈಲು: ವ್ಯಕ್ತಿ ನಾಪತ್ತೆ

ಅಮಾಸೆಬೈಲು ಸೆ.22 ( ಉಡುಪಿ ಟೈಮ್ಸ್ ವರದಿ): ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಹೆಬ್ರಿಯ ಮಡಾಮಕ್ಕಿ ಗ್ರಾಮದಲ್ಲಿ ನಡೆದಿದೆ. ಅಖಿಲ್ ಕುಮಾರ್ ಶೆಟ್ಟಿ (32)ನಾಪತ್ತೆಯಾದವರು.

ಇವರು 2 ವರ್ಷಗಳಿಂದ ಹೆಬ್ರಿಯ ರೈಸ್ ಮಿಲ್ಲಿಗೆ ಕೆಲಸಕ್ಕೆ ಹೋಗುತ್ತಿದ್ದರು. ಎಂದಿನಂತೆ ಸೆ.20 ರಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಸಿಎ ಪರೀಕ್ಷೆಯನ್ನು ಬರೆದಿದ್ದ ಇವರು ಪರೀಕ್ಷೆಯಲ್ಲಿ 2 ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದು ಇದೇ ಕಾರಣದಿಂದ ಮನೆ ಬಿಟ್ಟು ಹೋಗಿರುವ ಸಾಧ್ಯತೆ ಇರುವುದಾಗಿ ಅಖಿಲ್ ಅವರ ತಾಯಿ ಪ್ರೇಮ ಅವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!