ಕೋಟ: ಹೊಸ ದಾಖಲಾತಿ ಮಕ್ಕಳಿಗೆ ಒಂದು ಸಾವಿರ ಫಿಕ್ಸೆಡ್ ಡಿಪಾಸಿಟ್ ಬಾಂಡ್ ವಿತರಣೆ
ಕೋಟ(ಉಡುಪಿ ಟೈಮ್ಸ್ ವರದಿ): ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ರಚಿತವಾದ ‘ಶಿಕ್ಷಣ ಸೇವಾ ಸಮಿತಿ ಗೋಳಿಬೆಟ್ಟು’ ಇದರ ಆಶಯದ ಯೋಜನೆಗಳಲ್ಲಿ ಒಂದಾದ ಹೊಸ ದಾಖಲಾತಿ ಮಕ್ಕಳಿಗೆ ಒಂದು ಸಾವಿರ ಫಿಕ್ಸೆಡ್ ಡಿಪಾಸಿಟ್ ಬಾಂಡುಗಳನ್ನು ಕಳೆದ ವರ್ಷದಂತೆ ಈ ವರ್ಷವು ಶಾಲೆಯಲ್ಲಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಸೇವಾ ಸಮಿತಿ ಅಧ್ಯಕ್ಷ ವಿಜಯ್ ಪೂಜಾರಿ, ಉಪಾಧ್ಯಕ್ಷೆ ಕುಮಾರಿ ಪಾವನಾ, ಕಾರ್ಯದರ್ಶಿ ಯೋಗೀಶ್ ಕುಮಾರ್, ಐರೋಡಿ ಗ್ರಾಮ ಪಂಚಾಯತ್ ಸದಸ್ಯ ಸುಧಾಕರ ಪೂಜಾರಿ, ಎಸ್‌ಡಿಎಮ್‌ಸಿ ಅಧ್ಯಕ್ಷೆ ಪೂರ್ಣಿಮಾ, ಮಾಜಿ ಅಧ್ಯಕ್ಷ ರಾಜು ಮರಕಾಲ, ಸದಸ್ಯರಾದ ರಮೇಶ ಕುಲಾಲ, ಸಂತೋಷ್, ಸತೀಶ ನಾಯ್ಕ್, ಶಿವರಾಮ ಕುಲಾಲ, ಶಾರದಾ, ಸುಶೀಲಾ, ಅನಿತಾ, ಆಶಾ, ಶೈಲಾ ಮತ್ತಿತರರು ಪಾಲ್ಗೊಂಡಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಶಿಕ್ಷಕರಾದ ಮಹೇಶ್ ನಿರ್ವಹಿಸಿದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ರಚಿತವಾದ ‘ಶಿಕ್ಷಣ ಸೇವಾ ಸಮಿತಿ ಗೋಳಿಬೆಟ್ಟು’ ಹೊಸ ದಾಖಲಾತಿ ಮಕ್ಕಳಿಗೆ ಒಂದು ಸಾವಿರ ಫಿಕ್ಸೆಡ್ ಡಿಪಾಸಿಟ್ ಬಾಂಡುಗಳನ್ನು ಕಳೆದ ವರ್ಷದಂತೆ ಈ ವರ್ಷವು ಶಾಲೆಯಲ್ಲಿ ವಿತರಣೆ ಮಾಡಲಾಯಿತು. ಶಿಕ್ಷಣ ಸೇವಾ ಸಮಿತಿ ಅಧ್ಯಕ್ಷ ವಿಜಯ್ ಪೂಜಾರಿ, ಉಪಾಧ್ಯಕ್ಷೆ ಕುಮಾರಿ ಪಾವನಾ, ಕಾರ್ಯದರ್ಶಿ ಯೋಗೀಶ್ ಕುಮಾರ್, ಐರೋಡಿ ಗ್ರಾಮ ಪಂಚಾಯತ್ ಸದಸ್ಯ ಸುಧಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.