ಬೆಳಕಿಲ್ಲದ ಬದುಕಿಗೆ ದೀಪವಾದ ಯಶೋದ ಆಟೋ ಯೂನಿಯನ್ ಉಡುಪಿ
ಉಡುಪಿ(ಉಡುಪಿ ಟೈಮ್ಸ್ ವರದಿ): ವಿದ್ಯುತ್ ಸಂಪರ್ಕವಿಲ್ಲದೆ ಇರುವ ಮನೆಗೆ ಯಶೋದ ಆಟೋ ಯೂನಿಯನ್ ವತಿಯಿಂದ “ಸೋಲಾರ್ ದೀಪ” ಅಳವಡಿಸಿಲಾಯಿತು. ಈ ವಿದ್ಯುತ್ ದೀಪವನ್ನು ಜಿಲ್ಲಾಧ್ಯಕ್ಷರಾದ ಕೆ.ಕೃಷ್ಣಮೂರ್ತಿ ಉದ್ಘಾಟಿಸಿದರು,
ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘ ಉಡುಪಿ ಸಾರ್ವಜನಿಕರ ಹಿತರಕ್ಷಣೆಗೆ ಪೂರಕವಾಗುವ ಕೆಲಸ ಮಾಡುತ್ತಿದ್ದು , ಕಾರಣ ಕಳೆದ 25 ವರ್ಷಗಳಿಂದ ಸಿಮೆಂಟ್ ಶೀಟ್ ನ ಮನೆಯಲ್ಲಿ ಅಲಂಗಾರು, ದರ್ಖಾಸು ಮನೆ ಪೆರ್ಡೂರ್ ನಲ್ಲಿ ವಾಸವಿರೋ ತುಕ್ರ ಪೂಜಾರಿಯವರ ಕುಟುಂಬ ಸರ್ಕಾರದ ಯೋಜನೆಗಳಿಂದ ವಂಚಿತವಾಗಿತ್ತು, ಈಗ ಈ ಕುಟುಂಬಕ್ಕೆ ಆಸರೆಯಾಗುವಂತೆ ವಿದ್ಯುತ್ ಸಂಪರ್ಕವೇ ಇಲ್ಲದ ಈ ಮನೆಗೆ “ಸೋಲಾರ್ ದೀಪ” ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಲಕ್ಷ್ಮಣ, ತಾಲೂಕು ಅಧ್ಯಕ್ಷರು ಹರೀಶ್ ಅಮೀನ್ ಜಿಲ್ಲಾ ಸದಸ್ಯರಾದ ಅಬೂಬಕ್ಕರ, ಶ್ರೀನಿವಾಸ್ ಕಪ್ಪೆಟ್ಟು, ಹರೀಶ್ ಕಾಂಚನ್, ಸುಧಾಕರ್ ಪರ್ಕಳ, ಅಜಿತ್ ಪೂಜಾರಿ, ನಮಿಷ್, ಉಪಸ್ಥಿತರಿದ್ದರು.