ಮಣೂರು ವಾಜಪೇಯಿ ಖ್ಯಾತರಾದ ಪ್ರಗತಿ ಪರ ಕೃಷಿಕ ನರಸಿಂಹ ಅಡಿಗ ನಿಧನ

ಕೋಟ (ಉಡುಪಿ ಟೈಮ್ಸ್ ವರದಿ): ಪ್ರಗತಿಪರ ಕೃಷಿಕ ಮಣೂರು ವಾಜಪೇಯಿ ಎಂದೇ ಜನಜನಿತರಾಗಿದ್ದ ನರಸಿಂಹ ಅಡಿಗ 85 ವ ಮಂಗಳವಾರ ಬೆಳಿಗ್ಗೆ ಅನಾರೋಗ್ಯದಿಂದ ವಿಧಿವಶರಾದರು. ಆಗಿನ ಕಾಲದಲ್ಲಿ ಬಿಜೆಪಿಯನ್ನು ಗ್ರಾಮೀಣ ಭಾಗದಲ್ಲಿ ಕಟ್ಟಿಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿ ಮಣೂರು ವಾಜಪೇಯಿ ಎಂದು ಜನಜನಿತರಾಗಿದ್ದರು, ಕೋಟ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರಾಗಿ, ಕೋಟ ಸಿ.ಎ ಬ್ಯಾಂಕಿನ ಮಾಜಿ ನಿರ್ದೇಶಕರು ಅಗಿದ್ದ ಶ್ರೀಯುತರು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದರು.

ಮಣೂರಿನಲ್ಲಿ 1983 ರಲ್ಲೇ ಶುಭ ಡೈರಿ ಸ್ಥಾಪಿಸಿ ಹೈನುಗಾರಿಕೆಯಲ್ಲೂ ತನ್ನದೇ ಆದ ಛಾಪು ಮೂಡಿಸಿದವರು.ಬೆಂಗಳೂರಿನಲ್ಲಿ ಹಲವಾರು ವರ್ಷಗಳ ಕಾಲ ಹೋಟೆಲ್ ಉದ್ಯಮ ನೆಡೆಸಿ ಯಶಸ್ಸು ಸಾಧಿಸಿ ಮರಳಿ ಊರಿಗೆ ಬಂದು ಕಳೆದ 85 ವರ್ಷಗಳಿಂದ ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಹಾಲಿಂಗೇಶ್ವರ ದೇವಸ್ಥಾನ ಮಣೂರು, ಬ್ರಾಹ್ಮಣ ಸಭಾ ಮೊದಲಾದ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡು ಸಮಾಜಮುಖಿ ಕಾರ್ಯಗಳಿಂದ ಜನಮನ್ನಣೆಯನ್ನು ಗಳಿಸಿದ್ದರು.
ಡಾ.ಸದಾನಂದ ಅಡಿಗ,ಡಾ.ಸಚ್ಚಿದಾನಂದ ಅಡಿಗ,ಪ್ರಗತಿಪರ ಕೃಷಿಕ ಯುವ ಶಿವಾನಂದ ಅಡಿಗ ಸೇರಿದಂತೆ ಮೂರು ಜನ ಪುತ್ರರು, ಪತ್ನಿ ಒರ್ವ ಪುತಿ, ಅಳಿಯ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಲಾವರ ಸುರೇಂದ್ರ ಅಡಿಗ ಸೇರಿದಂತೆ ಅಸಂಖ್ಯಾತ ಅಭಿಮಾನಿಗಳನ್ನೂ ಬಂಧು ಬಳಗದವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!