ಉದ್ಯಾವರ: ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿ ‘ಮಕ್ಕಳ ಫೋಟೋ ಸ್ಪರ್ಧೆ’ : ಸುವಿತ್ , ಪ್ರಣಿಕ ಪ್ರಥಮ
ಉಡುಪಿ (ಉಡುಪಿ ಟೈಮ್ಸ್ ವರದಿ) : ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ತನ್ನ ಸುವರ್ಣ ಮಹೋತ್ಸವ ಸಂಭ್ರಮದ 30ನೇ ಕಾರ್ಯಕ್ರಮವಾಗಿ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಫೋಟೋ ಸ್ಪರ್ಧೆಯನ್ನು ಆಯೋಜಿಸಿದ್ದು, ಪ್ರಥಮ ವಿಭಾಗದಲ್ಲಿ ಸುವಿತ್ ಕುಲಾಲ್ ಪ್ರಥಮ ಸ್ಥಾನಗಳಿಸಿದರೆ, ದ್ವಿತೀಯ ವಿಭಾಗದಲ್ಲಿ ಪ್ರಣಿಕ ಯು ಕುಲಾಲ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯು, ಉಡುಪಿ ಜಿಲ್ಲೆಯ ಮುದ್ದು ಮಕ್ಕಳ ಫೋಟೋ ಸ್ಪರ್ಧೆಯನ್ನು 2 ವಿಭಾಗಗಳಲ್ಲಿ 0 ಯಿಂದ 2, ಮತ್ತು 2 ರಿಂದ 5 ವರ್ಷದ ವರೆಗೆ ಆಹ್ವಾನಿಸಿತ್ತು. ಜಿಲ್ಲೆಯ 246 ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ತೀರ್ಪುಗಾರರಾಗಿ ಫೋನಿಕ್ಸ್ ವೀಡಿಯೊ ಸ್ಟುಡಿಯೊ ಮಾಲಕ ವಿಲ್ಸನ್ ಡಿಸೋಜ ಶಿರ್ವ, ಪ್ರಸಾದ್ ಜತ್ತನ್ ಸ್ಟುಡಿಯೋ ಮಾಲಕ ಪ್ರಸಾದ್ ಜತ್ತನ್ನ ಉದ್ಯಾವರ, ಡಿಜಿಟಲ್ ಐಸ್ ಮಾಲಕ ಆಲ್ವಿನ್ ಕುಟಿನ್ನೊ ಕಲ್ಯಾಣಪುರ ವಿಜೇತರ ಅಯ್ಕೆ ನಡೆಸಿದರು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು 3 ಸಮಾಧಾನಕರ ಬಹುಮಾನ ಗಳಿದ್ದವು.
ವಿಜೇತರಿಗೆ ಡಿಸೆಂಬರ್ 13 ರಂದು ಸಂಜೆ 5 ಗಂಟೆಗೆ ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ವಠಾರದಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.
ವಿಜೇತರ ವಿವರ ಹೀಗಿದೆ :
0 – 2 ವಿಭಾಗ
ಪ್ರಥಮ ಸ್ಥಾನ : ಸುವಿತ್ ಕುಲಾಲ್ ತಂದೆ – ತಾಯಿ : ವಿಜಯ್ ಸುಪ್ರೀತಾ ಕುಲಾಲ್, ಬೈರಂಪಳ್ಳಿ
ದ್ವಿತೀಯ ಸ್ಥಾನ : ಹಿರಾಣ್ಮಾಯಿ ಭಟ್, ತಂದೆ – ತಾಯಿ : ಸುಧೀರ್ ಭಟ್, ಪ್ರಜ್ವಲಿ ಎಸ್ ಭಟ್, ಕುಂಜಿಬೆಟ್ಟು, ಉಡುಪಿ.
ತೃತೀಯ ಸ್ಥಾನ : ಆಮೆಯ ಎಂ. ನಂಬಿಯಾರ್, ತಂದೆ – ತಾಯಿ : ಮೋಹಿತ್ ಕೆ, ಅಪೂರ್ವ ಎಸ್. ನಂಬಿಯಾರ್, ಪೆರಂಪಳ್ಳಿ, ಉಡುಪಿ.
ಸಮಾಧಾನಕರ ಬಹುಮಾನಗಳು : ಶ್ರೇಯಿ ಅಲ್ಮೇಡಾ ,ತಂದೆ – ತಾಯಿ : ಸ್ವರಾಜ್ ಪಾಲ್ ಅಲ್ಮೆಡಾ, ದಿವ್ಯಾ ಜಿ ಬಿ, ತೆಂಕನಿಡಿಯೂರು.
ಐಶಾನಿ ದಿನೇಶ್ ಪೂಜಾರಿ, ತಂದೆ – ತಾಯಿ : ದಿನೇಶ್, ದಿವ್ಯಾ ಪೂಜಾರಿ, ಕೆರ್ವಾಶೆ, ಕಾರ್ಕಳ.
ಅನ್ವಯ್ ಆರ್ ಶೆಟ್ಟಿಗಾರ್ ,ತಂದೆ – ತಾಯಿ : ರವಿಕಿರಣ್, ಗೀತಾ ಶೆಟ್ಟಿಗಾರ್, ಉದ್ಯಾವರ.
2 – 5 ವಿಭಾಗ
ಪ್ರಥಮ ಸ್ಥಾನ : ಪ್ರಣಿಕ ಯು ಕುಲಾಲ್, ತಂದೆ – ತಾಯಿ : ಉದಯ – ವರಲಕ್ಷ್ಮಿ ಕುಲಾಲ್, ಬೈರಂಪಳ್ಳಿ
ದ್ವಿತೀಯ ಸ್ಥಾನ : ರಿಯಾನ್ಶಿ ,ತಂದೆ – ತಾಯಿ : ಕಿರಣ್ – ಸೋನಿಯ ಕಿರಣ್, ಪಿತ್ರೋಡಿ, ಉದ್ಯಾವರ.
ತೃತೀಯ ಸ್ಥಾನ : ರಿಷಿಕಾ ಆರ್ ಪೂಜಾರಿ, ತಂದೆ – ತಾಯಿ : ರವಿಕಿರಣ್ ಪೂಜಾರಿ – ವಿದ್ಯಾಶ್ರೀ ಕುಂಜಿಬೆಟ್ಟು, ಉಡುಪಿ
ಸಮಾಧಾನಕರ ಬಹುಮಾನಗಳು : ಸಿದ್ಧಿ ಎಸ್. ಕಾಮತ್, ತಂದೆ – ತಾಯಿ : ಸತೀಶ್, ದಿವ್ಯಾ ಕಾಮತ್ ಕೊಡವೂರು
ಕಿಯಾರ ಲೂಯಿಸಾ ರೇಗೋ, ತಂದೆ – ತಾಯಿ : ಬ್ರಾಯನ್ – ವಿಯೋಲಾ ರೇಗೋ, ಕೊಡವೂರು .
ಗೌರಂಶ್, ತಂದೆ – ತಾಯಿ : ಹರ್ಷ ಇಂದಿರಾ ಮೈಂದನ್, ಪಿತ್ರೋಡಿ ಉದ್ಯಾವರ.