ಮಣಿಪಾಲ: ಮನೆ, ಮನ ಮೆಚ್ಚುವ ಎಸ್ ಡಿ ಫರ್ನೀಚರ್ ಹಾಗೂ ಇಂಟಿರೀಯರ್ಸ್
ಉಡುಪಿ(ಉಡುಪಿ ಟೈಮ್ಸ್ ವರದಿ): ನಿಮ್ಮ ಹೊಸ ಮನೆ ಕಟ್ಟಿ ಇಂಟೀರಿಯರ್‍ಸ್ ಬಗ್ಗೆ ಯೋಚನೆ ಮಾಡುತ್ತಿದ್ದೀರಾ? ಅಥವಾ ಮನೆಗೆ ಹೊಸ ಫರ್ನೀಚರ್‍ಸ್‌ಗಳನ್ನು ಕೊಂಡು ಕೊಳ್ಳುವ ಪ್ಲಾನ್ ಮಾಡುತ್ತಿದ್ದೀರಾ?… ಹಾಗಾದ್ರೆ ಇನ್ಮುಂದೆ ಈ ಚಿಂತೆ ಬಿಡಿ ಯಾಕೆಂದ್ರೆ.. ನಿಮ್ಮ ಕನಸಿನ ಫರ್ನಿಚರ್ ಹಾಗೂ ಇಂಟೀರಿಯರ್‍ಸ್‌ನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನಿಮಗಾಗಿ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಎಸ್ ಡಿ ಫರ್ನೀಚರ್‍ಸ್ ನಲ್ಲಿ ಲಭ್ಯವಿದೆ.
ಸತತ 5 ವರ್ಷಗಳಿಂದ ಗ್ರಾಹಕರ ಮನೆಮಾತಾಗಿರುವ ಎಸ್‌ಡಿ ಫರ್ನೀಚರ್‍ಸ್ ಗುಣಮಟ್ಟತೆ ಹಾಗೂ ಉತ್ತಮ ಸೇವೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ನಿಮ್ಮ ಕನಸಿನ ಮನೆಗೆ ಬೇಕಾದ ಎಲ್ಲಾ ಬಗೆಯ ಫರ್ನೀಚರ್‍ಸ್ ಹಾಗೂ ಇಂಟೀರಿಯರ್‍ಸ್‌ನ ಗೊಂದಲಕ್ಕೆ ನಿಮಗೆ ಸಿಗುತ್ತೆ ಒನ್ ಸ್ಟಾಪ್ ಸೊಲ್ಯೂಶನ್.
ಉಡುಪಿಯಲ್ಲೇ ಐಎಸ್‌ಓ ಪ್ರಮಾಣಿಕೃತ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಸ್‌ಡಿ ಫರ್ನಿಚರ್‍ಸ್ ತಮ್ಮದೇ ಆದ ಶ್ರೀ ದುರ್ಗಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೂಲಕ ಇಎಂಐ ಆಧಾರದಲ್ಲಿ ಫರ್ನೀಚರ್‍ಸ್‌ನ್ನು ಖರೀದಿಸುವ ಅವಕಾಶ ನೀಡುತ್ತಿದೆ. ಇದರೊಂದಿಗೆ ಗೃಹ ಲಕ್ಷ್ಮೀ ಮಾಸಿಕ ಪೀಠೋಪಕರಣ ಖರೀದಿ ಯೋಜನೆ ಮೂಲಕ ಗ್ರಾಹಕರು ತಮ್ಮ ಇಚ್ಚೆಯ ಪೀಠೋಪಕರಣಗಳನ್ನು ಖರೀದಿಸಲು ಅವಕಾಶ ಇದ್ದು, ಐಶಾರಾಮಿ ಪೀಠೋಪಕರಣಗಳನ್ನು ಖರೀದಿಸುವ ತಮ್ಮ ಕನಸನ್ನು ಈ ಯೋಜನೆ ಮೂಲಕ ನನಸಾಗಿಸಿಕೊಳ್ಳ ಬಹುದಾಗಿದೆ.
ಸಂಸ್ಥೆಯ ಸದಸ್ಯ ಗ್ರಾಹಕರು ಮಾಸಿಕವಾಗಿ 600 ರೂ.ರಿಂದ 1000 ರೂ ಮಾಸಿಕವಾಗಿ ಶ್ರೀ ದುರ್ಗಾ ಕ್ರೆಡಿಟ್ ಕೋಪರೇಟಿವ್ ಸೋಸೈಟಿಯಲ್ಲಿ ಪಾವತಿಸಬೇಕಾಗಿದ್ದು, ಮಾಸಿಕವಾಗಿ ತಾವು ಪಾವತಿಸಿದ ಮೊತ್ತಕ್ಕೆ ಸೊಸೈಟಿ ವತಿಯಿಂದ 6000 ರೂ ಹೆಚ್ಚುವರಿ ಬೋನಸ್ ಪಡೆದು ಗ್ರಾಹಕರು ಇಲ್ಲಿ ತಮ್ಮಿಚ್ಚೆಯ ಫರ್ನಿಚರ್‍ಸ್‌ನ್ನು ಕೊಂಡುಕೊಳ್ಳಬಹುದಾಗಿದೆ.
ಅತ್ಯಾಧುನಿಕ ಯಂತ್ರೋಪಕರಣಗಳು ಹಾಗೂ ನುರಿತ ಕಾರ್ಮಿಕರಿಂದ ಕರಕುಶಲ ಕೆಲಸಗಳಿಂದ ಅತ್ಯಾಧುನಿಕ ಶೈಲಿಯ ಪೀಠೋಪಕರಣಗಳು, ಬಾಗಿಲು, ಸೋಫಾಸೆಟ್, ವಾರ್ಡ್ ರೋಬ್, ಮಾಡ್ಯುಲರ್ ಕಿಚನ್, ಡೈನಿಂಗ್ ಟೇಬಲ್ ಇತ್ಯಾದಿ ಅಗತ್ಯ ಉಪಕರಗಳನ್ನು ಗ್ರಾಹಕರ ಇಚ್ಚೆಗೆ ಅನುಗುಣವಾಗಿ ತಯಾರಿಸಿ ಕೊಡಲಾಗುವುದು.
ತಮ್ಮದೇ ಫ್ಯಾಕ್ಟರಿಯಲ್ಲಿ ಅತ್ಯಾಧುನಿಕ ಯಂತ್ರಗಳಿಂದ ತಯಾರಿಸಿದ ಪೀಠೋಪಕರಣಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದ್ದು. ಯಾವುದೇ ಮಧ್ಯವರ್ತಿಗಳ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಫ್ಯಾಕ್ಟರಿಯಿಂದ ಪೀಠೋಪಕರಣಗಳು ಗ್ರಾಹಕರ ಕೈಸೇರುತ್ತದೆ. ಇನ್ನು ಉಡುಪಿ, ಮಂಗಳೂರು, ಉತ್ತರ ಕನ್ನಡಗಳಿಗೆ ಇವರ ಸೇವೆ ಲಭ್ಯವಿದ್ದು ಪೀಠೋಪಕರಣಗಳು ಫ್ಯಾಕ್ಟರಿ ದರದಲ್ಲಿ ಸಿಗುತ್ತದೆ.
ಮನೆ, ಕಚೇರಿ ಕೆಲಸಕ್ಕೆ ಅಗತ್ಯವಿರುವ ಮರದ ಪೀಠೋಪಕರಣಗಳು, ಡೈನಿಂಗ್ ಟೇಬಲ್ಸ್, ಸೋಫಾ ಸೆಟ್, ಕುಶನ್ ವರ್ಕ್ಸ್ ದೇವಸ್ಥಾನಕ್ಕೆ ಸಂಬಂಧಿಸಿದ ರಥ, ಪಲ್ಲಕ್ಕಿ, ಇತ್ಯಾದಿಗಳನ್ನೂ ತ್ವರಿತ ಸಮಯದಲ್ಲಿ ಮಾಡಿಕೊಡಲಾಗುವುದೆಂದು ಎಂದು ಎಸ್ ಡಿ ಫರ್ನೀಚರ್‍ಸ್‌ನ ಮೋಹನ್ ಭಟ್ ತಿಳಿಸಿದ್ದಾರೆ.
ಹಾಗಾದ್ರೆ ಇನ್ನು ಮುಂದೆ ನಿಮ್ಮ ಕನಸಿನ ಪರ್ನೀಚರ್‍ಸ್‌ಗಳನ್ನು ನಿಮ್ಮದಾಗಿಸಲು ಎಸ್‌ಡಿ ಫರ್ನೀಚರ್‍ಸ್‌ಗೆ ಭೇಟಿ ನೀಡಿ, ನಿಮ್ಮ ಕನಸಿನ ಮನೆಯನ್ನು ಇನ್ನಷ್ಟು ಚೆಂದವಾಗಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9986871716 – 9742509897