ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಮಿನ್ನು ಎ. ಸಿ ಆಯ್ಕೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಪ್ರತಿ ವರ್ಷದಂತೆ ಶ್ರೀ ಅಘೋರೇಶ್ವರ ಕಲಾರಂಗ ದ ವತಿಯಿಂದ ನೀಡಲ್ಪಡುವ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಿನ್ನು ಎ ಸಿ ಯವರು ಆಯ್ಕೆ ಆಗಿದ್ದಾರೆ.
ಪ್ರಶಸ್ತಿ ವಿತರಣ ಕಾರ್ಯಕ್ರಮವು ನವಂಬರ್ 29 ರಂದು ಶ್ರೀ ಅಘೋರೇಶ್ವರ ಸಭಾಭವನ ಕಾರ್ತಟ್ಟು ಸಾಲಿಗ್ರಾಮ ನಲ್ಲಿ ನಡೆಯಲಿದೆ.
ಮಿನ್ನು ರವರು ಗುಲ್ಬರ್ಗಾ, ಮೈಸೂರು, ಹಾಗೂ ಪ್ರಸ್ತುತ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನೂರಾರು ಹೆರಿಗೆ ಹಾಗೂ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯದಲ್ಲಿ ತೊಡಗಿಸಿದ್ದು,ತಮ್ಮ ಪರಿಸರದಲ್ಲಿ ಕೊರೋನಾ ತಡೆಗಟ್ಟುವಲ್ಲಿ ಮಹತ್ತರವಾದ ಕಾರ್ಯ ನಿರ್ವಹಿಸಿರುತ್ತಾರೆ.
ಅವರ ಕಾರ್ಯವನ್ನ ಗುರುತಿಸಿ ಈ ಸಾಲಿನ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಮಿನ್ನು ಎ. ಸಿ ಯವರನ್ನ ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.