ಕೋಟ ಅಮೃತೇಶ್ವರಿ ದೇವಳಕ್ಕೆ ಸಚಿವ ವಿ.ಸುನೀಲ್ ಕುಮಾರ್ ಭೇಟಿ

ಕೋಟ(ಉಡುಪಿ ಟೈಮ್ಸ್ ವರದಿ ): ರಾಜ್ಯ ಸರಕಾರದ ನೂತನ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸುನಿಲ್ ಕುಮಾರ್ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದೇವಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಸಚಿವರನ್ನು ಸ್ವಾಗತಿಸಿದರು. ಶ್ರೀ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಗೌರವಿಸಿಕೊಂಡರು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ.ಸುಬ್ರಾಯ ಆಚಾರ್ಯ,ಚಂದ್ರ ಪೂಜಾರಿ,ಸುಂದರ್ ಕೆ,ಸುಶೀಲ ಸೋಮಶೇಖರ್, ಜಿ.ಸತೀಶ್ ಹೆಗ್ಡೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಠ್ಠಲ್ ಪೂಜಾರಿ ಐರೋಡಿ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಮುಖಂಡರುಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುರೇಶ್ ಶೆಟ್ಟಿ, ರಾಜು ಪೂಜಾರಿ, ಸತೀಶ್ ಕುಂದರ್, ಸುರೇಶ್ ಕುಂದರ್, ಅಜಿತ್ ಶೆಟ್ಟಿ ಕೊತ್ತಾಡಿ,ಸಂತೋಷ್ ಪ್ರಭು,ಅಜಿತ್ ದೇವಾಡಿಗ,ಶಂಕರ್ ಕುಲಾಲ್ ,ಸಂಜೀವ ದೇವಾಡಿಗ,ಸಾಲಿಗ್ರಾಮ ಪ.ಪಂ ಉಪಾಧ್ಯಕ್ಷೆ ಅನುಸೂಯ ಹೇರ್ಳೇ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!