ದೇಶ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು : ಎಂ ಪಿ ಮೊಯಿದಿನಬ್ಬ
ಮುದರಂಗಡಿ : ಇಲ್ಲಿನ ಸನ್ನಿ ಜಾಮಿಯಾ ಮಸೀದಿ ಹಾಗೂ ಅಲ್ ಜಾಮಿಯ ಯಂಗ್ ಮನ್ಸ್ ಅಸೋಸಿಯೇಷನ್ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಜರುಗಿತು. ಧ್ವಜಾರೋಹಣ ಮಾಡಿದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ ಪಿ ಮೊಯಿದಿನಬ್ಬ ಮಾತನಾಡಿ ದೇಶ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಬೇಕು, ಸ್ವಾತಂತ್ರ್ಯ ಕ್ಕಾಗಿ ತ್ಯಾಗ ಮಾಡಿದ ಹೋರಾಟಗಾರರನ್ನು ಗೌರವಿಸುವುದಲ್ಲದೆ ಅವರ ತ್ಯಾಗ ಬಲಿದಾನಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ,
ಹಲವು ಜಾತಿ ಧರ್ಮ ಗಳಿರುವ ಭಾರತದಲ್ಲಿ, ನಾವಿಂದು ಸ್ವತಂತ್ರವಾಗಿ ಬದುಕಲು ಸಾವಿರಾರು ಹೋರಾಟಗಾರರು ಸೈನಿಕರು ತಮ್ಮ ಪ್ರಾಣವನ್ನು ಅರ್ಪಿಸಿರುತ್ತಾರೆ, ಸಂಭ್ರಮದ ಈ ದಿನದಂದು ನಮ್ಮ ಶ್ರೇಷ್ಠ ರಾಷ್ಟ್ರದ ಶಾಂತಿ ಮತ್ತು ಏಕತೆಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ಕೈಗೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಸೀದಿಯ ಧರ್ಮ ಗುರುಗಳಾದ ಮಹಮ್ಮದ್ ಝಾಕಿ, ಅಧ್ಯಕ್ಷ ಮುಬಾರಕ್, ರಿಯಾಝ್ ಶೇಖ್, ಆತಿಫ್ ಮೊದಲಾದವರು ಉಪಸ್ಥಿತರಿದ್ದರು.