ಉಡುಪಿ :’ನಮ್ಮ ನಡೆ ಬೆಣಗಲ್ ಕಡೆಗೆ’ ಪಾದಯಾತ್ರೆ ಸಂಪನ್ನ
ಉಡುಪಿ (ಉಡುಪಿ ಟೈಮ್ಸ್ ವರದಿ): ಸ್ವಂತ್ರತೋತ್ಸವದ 75 ನೇ ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಉಡುಪಿ ಮನೆ ನಿವೇಶನ ಸಂತ್ರಸ್ತರು “ನಮ್ಮ ನಡೆ ಬೆನಗಲ್ ಕಡೆ” ಎಂಬ ಪಾದಯಾತ್ರೆಗೈದರು. ಸಂವಿಂಧಾನ ರೂಪಿಸಲು ಬೆಣಗಲ್ ನರಸಿಂಗ ರಾವ್, ಡಾ. ಬಿ.ಆರ್. ಅಂಬೇಡ್ಕರ್ ಮೊದಲ್ಗೊಂಡು ಮಹಾನ್ ವಿದ್ವಾಂಸರು, ಧೀಮಂತರು ಮತ್ತು ನಿಷ್ಠುರ ಪ್ರಾಮಾಣಿಕರು ಹಚ್ಚಿಕೊಟ್ಟ ಸಂವಿಧಾನ ಎಂಬ ಕೈದೀವಿಗೆ ಆಡಳಿತ, ನ್ಯಾಯದಾನ ಮುಂತಾದ ಎಲ್ಲ ರಂಗಗಳಲ್ಲಿ ಇಂದೇಕೆ ಅಪಚಾರಕ್ಕೆ ಈಡಾಗುತ್ತಿರುವ ಈ ಸಂದರ್ಭದಲ್ಲಿ ಇದೆಲ್ಲವೂ ಸರಿಯಾಗಬೇಕೆಂಬ ಚಿಂತನೆಯೊಂದಿಗೆ ಜಿಲ್ಲಾಧಿಕಾರಿಯವರ ಕಚೇರಿಯ ಮುಂಭಾಗದಿಂದ ಆರಂಭಗೊಳ್ಳುವ ಪಾದಯಾತ್ರೆ ಅಲ್ಲಿಂದ 28 ಕಿ.ಮೀ ದೂರದಲ್ಲಿರುವ ಬೆಣಗಲ್ ಗ್ರಾಮದವರಗೆ ಪಾದಯಾತ್ರೆ ನಡೆಸಲಾಯಿತು.
ಈ ಪಾದಯಾತ್ರೆಯನ್ನು ಲೇಖಕ, ಚಿಂತಕ ಅರವಿಂದ ಚೊಕ್ಕಾಡಿ ಮತ್ತು ಲೇಖಕ ಮತ್ತು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.
ಪ್ರಾಧ್ಯಾಪಕ ಡಾ. ವಿಷ್ಣುಮೂರ್ತಿ ಪ್ರಭು, ಯಕ್ಷಗಾನ ಕಲಾವಿದ, ಐರೋಡಿ ಮಂಜುನಾಥ ಕುಲಾಲ್, ಎಂ.ಎಸ್. ಭಂಡಾರಿ, ನಿವೃತ್ತ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಲೇಖಕ ಬೇಳೂರು ರಾಘವ ಸೆಟ್ಟಿ, ನಿವೃತ್ತ ಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ ಮೊದಲಾದವರು ಪಾದಯಾತ್ರೆಯಲ್ಲಿ ಭಾಗವಹಿಸಿದರು.
ಸಂಘಟಕರಲ್ಲಿ ತಾರಾನಾಥ ಹೆಗ್ಡೆ, ರೋಬೇರ್ಟ್ ಡಿಸೋಜ, ವಾಸುದೇವ ಗಡಿಯಾರ, ದೇವು ಹನೆಹಳ್ಳಿ ಮತ್ತು ಇತರ ಉಡುಪಿ ನಿವೇಶನ ಸಂತ್ರಸ್ಥರು ಹಾಗೂ ಬೆಣಗಲ್ ನಿವಾಸಿಗಳು ಉಪಸ್ಥಿತರಿದ್ದರು.