ಸಾಲಿಗ್ರಾಮ ಶ್ರೀ ಅಘೋರೇಶ್ವರ ಕಲಾರಂಗ: ಸ್ವಾತಂತ್ರೋತ್ಸವ ಆಚರಣೆ
ಸಾಲಿಗ್ರಾಮ(ಉಡುಪಿ ಟೈಮ್ಸ್ ವರದಿ) ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯು ಶ್ರೀ ಅಘೋರೇಶ್ವರ ಕಲಾ ರಂಗ ಕಾರ್ತಟ್ಟು ದ ವತಿಯಿಂದ ಚಿತ್ರಪಾಡಿ ಯಲ್ಲಿ ನೇರವೇರಿತು. ಧ್ವಜಾರೋಹಣ ವನ್ನು ನಿವೃತ್ತ ಸೈನಿಕರಾದ ಶರತ್ ಕುಮಾರ್ ಕೆ ಯವರು ನೇರವೇರಿಸಿದರು. ಪ್ರತಿ ಬಾರಿಯಂತೆ ಈ ಬಾರಿಯೂ ನಿವೃತ್ತ ಸೈನಿಕ ರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಘೋರೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂದ್ರ ಶೇಖರ ಕಾರಂತರು ಶುಭ ಹಾರೈಸಿದರು. ಸಾಲಿಗ್ರಾಮ ಪಟ್ಟಣ ಪಂಚಾಯಾತ್ ನ ಸದಸ್ಯರಾದ ಶ್ಯಾಮ ಸುಂದರ್ ನಾಯರಿ ಹಾಗೂ ಸುಕನ್ಯಜಗದೀಶ್ ಶೆಟ್ಟಿ, ಪಾಂಚಜನ್ಯ ಯುವಕ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಉಪಸ್ಠಿತರಿದ್ದರು, ಕಲಾರಂಗದ ಅಧ್ಯಕ್ಷ ಲಕ್ಷ್ಮಣ ನಾಯರಿ ಸ್ವಾಗತಿಸಿ, ರಾಧಾಕೃಷ್ಣ ಬ್ರಹ್ಮಾವರ ರವರು ವಂದಿಸಿದರು ,ಕಲಾರಂಗದ ಸದಸ್ಯರು ಉಪಸ್ಠಿತರಿದ್ದರು.
ಕಲಾರಂಗದ ಸದಸ್ಯರೇ ಹಡಿಲು ಬಿದ್ದ ಭೂಮಿಯನ್ನು ಕೃಷಿ ಮಾಡಿ ಅದರಿಂದ ಬಂದ ಸುಮಾರು 4 ಕ್ವಿಂಟಾಲ್ ಅಕ್ಕಿಯನ್ನು ಸ್ಪಂದನ ಬೌದ್ಧಿಕ ದಿವ್ಯಾಂಗರ ಪುನರ್ವಸತಿ ಕೇಂದ್ರ ತೆಂಕಬೆಟ್ಟು ಕೊಳಲಗಿರಿ, ಇವರಿಗೆ ನೀಡಲಾಯಿತು ಅಧ್ಯಕ್ಷರು ಅಕ್ಕಿಯನ್ನು ಪುನರ್ವಸತಿ ಕೇಂದ್ರ ದ ಶಿಕ್ಷಕರಿಗೆ ಹಸ್ತಾಂತರಿಸಿದರು. ಶ್ರೀಮತಿ ಮಾಲತಿ ಮತ್ತು ನಾರಾಯಣ ನಾಯರಿ ಯವರು ಕೊಡಮಾಡಿದ ಮಿಕ್ಸರ್ ಗ್ರೈಂಡರ್ ನ್ನು ಕಲಾರಂಗದ ಸದಸ್ಯರಾದ ನಿತ್ಯಾನಂದ ನಾಯರಿ ಯವರು ಹಸ್ತಾಂತರಿಸಿದರು. ಕಲಾರಂಗದ ಸದಸ್ಯರಾದ ಪ್ರಭಾಕರ್ ನಾಯರಿ, ಕಾರ್ಯದರ್ಶಿ ನಾಗರಾಜ್ ಐತಾಳ್ ಹಾಗೂ ಸದಸ್ಯರು ಹಾಜರಿದ್ದರು