ಕೋಟ ಪಂಚವರ್ಣ ಯುವಕ ಮಂಡಲ: ‘ಪ್ಲಾಸ್ಟಿಕ್ ಮುಕ್ತ ಸಮಾಜ’ ಯೋಜನೆ
ಕೋಟ(ಉಡುಪಿ ಟೈಮ್ಸ್ ವರದಿ):ಕೋಟದ ಪ್ರತಿಷ್ಠಿತ ಯುವಕ ಮಂಡಲವಾದ ಪಂಚವರ್ಣ ಯುವಕ ಮಂಡಲ ಇದರ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ವರುಣತೀರ್ಥಕೆರೆ ಸಮೀಪ ಸಂಘದ ಕಛೇರಿಯಲ್ಲಿ ನಡೆಯಿತು. ತೆಕ್ಕಟ್ಟೆ ಪರಿಸರದ ನಿವೃತ್ತ ಯೋಧ ರವಿ ಶೆಟ್ಟಿ ಇವರು ಧ್ವಜಾರೋಹಣ ನೆರವೆರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕೋಟದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಇವರನ್ನು ಕೊರೋನಾ ವಾರಿಯರ್ಸ್ ನೆಲೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಕೋಟದ ಪರಿಸರವಾದಿ ಗಿರೀಶ್ ನಾಯಕ್ ಸ್ವಾತಂತ್ರ್ಯ ಸಿಕ್ಕಿರುವುದು ಮನುಷ್ಯನಿಗೆ ಮಾತ್ರ ಪರಿಸರಕ್ಕೆ ಇನ್ನೂ ಸಿಕ್ಕಿಲ್ಲ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಅನುಭವಿಸಬೇಕಾದರೆ ನಮ್ಮ ಪರಿಸರವನ್ನು ಉಳಿಸಿ ಬೆಳೆಸಿದಾಗ ಅದನ್ನು ಕಾಣಲು ಸಾಧ್ಯವಾಗುತ್ತದೆ.ಹಿಂದೆ ನಮ್ಮ ವೀರ ಸೇನಾನಿಗಳು ಅರ್ಥ ಪೂರ್ಣ ಸ್ವಾತಂತ್ರ ದಕ್ಕಿಸಿದ್ದಾರೆ. ಅವರನ್ನು ವರ್ಷಕೊಮ್ಮೆ ನೆನಪಿಸಿದರೆ ಸಾಲದು ಬದಲಾಗಿ ವರ್ಷವಿಡೀ ನೆನೆಯುವ ಕೆಲಸ ಆಗಬೇಕು ಅದರ ಜೊತೆ ಯುವ ಸಮುದಾಯಕ್ಕೆ ಅರಿವು ಮೂಡಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು ಈ ನಿಟ್ಟಿನಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಕಳೆದ 25 ವರ್ಷಗಳಿಂದ ಸಾಮಾಜಮುಖಿ ಕಾರ್ಯದ ನಡುವೆ ಪರಿಸರ ಸಂರಕ್ಷಿಸುವ ಕಾಯಕದಲ್ಲಿ ತೋಡಗಿಕೊಂಡಿರುವುದು ಪ್ರಶಂಸನೀಯ ಎಂದು ಸಾಮಾಜಿಕ ಕಾರ್ಯವನ್ಮು ಶ್ಲಾಘಿಸಿದರು.