ದೇಶಕ್ಕೆ ಸ್ವಾತಂತ್ರ್ಯ ಬರುವಲ್ಲಿ ಕ್ರಾಂತಿಕಾರಿಗಳ ಕೊಡುಗೆ ಅನನ್ಯ :ಸುರೇಶ್ ಕುಂದರ್
ಕೋಟ( ಉಡುಪಿ ಟೈಮ್ಸ್ ವರದಿ): ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಗೃಹದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕೋಟ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಐರೋಡಿ ಧ್ವಜಾರೋಹಣ ನೆರವೇರಿಸಿ ದೇಶಕ್ಕೆ ಸ್ವಾತಂತ್ರ್ಯ ಬರುವಲ್ಲಿ ಕ್ರಾಂತಿಕಾರಿಗಳ ಕೊಡುಗೆ ಅನನ್ಯವಾಗಿದೆ.ಹಲವು ವೀರ ಹೋರಾಟಗಾರರ ತ್ಯಾಗಬಲಿದಾನಕ್ಕೆ ಸ್ವಾತಂತ್ರ್ಯ ಬಳವಳಿಯಾಗಿ ಸಿಕ್ಕಿದೆ. ಸಾರ್ವಕರ್,ಭಗತ್ ಸಿಂಗ್,ಸುಖದೇವ್,ಸುಬಾಷ್ ಚಂದ್ರ ಬೋಸ್,ಚಂದ್ರಶೇಖರ ಆಜಾದ್ ಕ್ರಾಂತಿಕಾರಿ ನಿಲುವು ಬ್ರಿಟಿಷರೇ ಭಾರತ ಬಿಟ್ಟು ತೋಲಗುವಂತೆ ಮಾಡಿದ್ದು ಜನಮನದಲ್ಲಿ ಉಳಿಯುವಂತಾಗಿದೆ.ಇದರ ಭಾಗವಾಗಿ ಇಂದು ನಮ್ಮ ದೇಶದ ಪ್ರಧಾನಿಗಳ ದಿಟ್ಟ ನಿರ್ಧಾರದಿಂದ ಒಂದೊಂದೆ ಕನಸು ನನಸಾಗುತ್ತಿದೆ ಎಂದು ಇಂದಿನ ಸ್ವಾತಂತ್ರ್ಯವನ್ನು ಮನವರಿಕೆ ಮಾಡಿದರು.
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾ ಕಾರ್ಯದರ್ಶಿ ವಿಠ್ಠಲ್ ಪೂಜಾರಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ಪಾಂಡೇಶ್ಚರ ಗ್ರಾಮಪಂಚಾಯತ್ ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ,ಐರೋಡಿ ಗ್ರಾ.ಪಂ ಸದಸ್ಯರಾದ ಅಶ್ವಿನ್,ಸುಬ್ರಹ್ಮಣ್ಯ ಆಚಾರ್ಯ, ಕಿರಣ್,ಸರೋಜ ಸಂತೋಷ್, ರಮ್ಯಾ,ಹಿರಿಯರಾದ ಸಂಜೀವ ಪೂಜಾರಿ,ಧುಮಾ ಪೂಜಾರಿ, ಬಸವ ಪೂಜಾರಿ,ಗೋಪಾಲ ಪೂಜಾರಿ,ನಿತೀನ್ ಕುಮಾರ್, ಸಂಜನಾ,ಶಿವರಾಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.