ಕೇಂದ್ರ ಸರಕಾರದಿಂದ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ದಕ್ಕೆ: ಅಶೋಕ್ ಕೊಡವೂರು
ಉಡುಪಿ(ಉಡುಪಿ ಟೈಮ್ಸ್ ವರದಿ) : ಸ್ವಾತಂತ್ರ್ಯ ಪೂರ್ವದ ಸ್ಥಿತಿಗತಿ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದ ಬಗ್ಗೆ ಅರಿವಿದ್ದರೆ ಮಾತ್ರ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಅರಿವು ಎಲ್ಲರಿಗೂ ಆಗುತ್ತದೆ ಇಲ್ಲದಿದ್ದರೆ ಹೆಸರಿಗೆ ಮಾತ್ರ ಆಚರಣೆ ಆಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಸೇವಾದಳ ಜಂಟಿಯಾಗಿ ಹಮ್ಮಿಕೊಂಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,
ಕೇಂದ್ರ ಸರಕಾರದಿಂದ ಇಂದು ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ದಕ್ಕೆಯಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುವುದು ಒಂದು ಸುಂದರ ಪರಿಕಲ್ಪನೆ ಮಾತ್ರ. ಜನರು ಇಂದು ಮೂಲಭೂತ ಸೌಲಭ್ಯಗಳನ್ನು ಪಡೆಯಲು ಒದ್ದಾಡುತ್ತಿದ್ದಾರೆ. ನಿರುದ್ಯೋಗ, ಅಸಮರ್ಪಕ ಶಿಕ್ಷಣ ವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ಕೊರತೆಯನ್ನು ನೀಗಿಸುವುದು ಇಂದಿನ ಅಗತ್ಯತೆಯಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಜನರಿಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷವು ಒಂದು ವರ್ಷಗಳ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ದಿನೇಶ್ ಪುತ್ರನ್, ಬಿ. ನರಸಿಂಹ ಮೂರ್ತಿ, ಭಾಸ್ಕರ್ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಅಹ್ಮದ್, ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉದ್ಯಾವರ ನಾಗೇಶ್ ಕುಮಾರ್, ಕಿಶೋರ್ ಎರ್ಮಾಳ್, ಹಬೀಬ್ ಅಲಿ, ಕೀರ್ತಿ ಶೆಟ್ಟಿ, ಸದಾಶಿವ ಕಟ್ಟೆಗುಡ್ಡೆ, ಯತೀಶ್ ಕರ್ಕೆರಾ, ಬಾಲಕೃಷ್ಣ ಪೂಜಾರಿ, ಪ್ರಶಾಂತ್ ಜತ್ತನ್ನ, ಲೂಯಿಸ್ ಲೋಬೊ, ಸುರೈಯಾ ಅಂಜುಮ್, ಶಾಂತಾರಾಮ್ ಸಾಲ್ವಾಂಕರ್, ಕೃಷ್ಣಮೂರ್ತಿ ಆಚಾರ್ಯ, ಉಪೇಂದ್ರ ಗಾಣಿಗ, ಶರತ್ ನಾಯ್ಕ್, ರಾಜೇಶ್, ಪ್ರಕಾಶ್ ಕೊಡವೂರು ಉಪಸ್ಥಿತರಿದ್ದರು.