ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ: ಸುನಿಲ್ ಕುಮಾರ್
ಉಡುಪಿ (ಉಡುಪಿ ಟೈಮ್ಸ್ ವರದಿ): ದೇಶಕ್ಕಾಗಿ ಸೈನಿಕರು ರಾತ್ರಿ ಹಗಲು ಎನ್ನದೇ ತಮ್ಮ ಪ್ರಾಣವನ್ನು ಅರ್ಪಿಸಿ ದೇಶವನ್ನು ಕಾಪಾಡುತ್ತಿದ್ದಾರೆ ಇವರ ಸೇವೆಯನ್ನು ನಾವು ಗೌರವಿಸುವುದು ನಮ್ಮ ಕರ್ತವ್ಯ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಹಾಗು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್ ತಿಳಿಸಿದರು. ಅವರು ಇಂದು ನಡೆದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮಾಜಿ ಸೈನಿಕರ ಹುತಾತ್ಮ ವೇದಿಕೆ ಅಜ್ಜರಕಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ರಘಪತಿ ಭಟ್ ,ಉಡುಪಿ ಜಿಲ್ಲಾಧಿಕಾರಿ ಜಗದೀಶ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಷ್ಣುವರ್ಧನ್ ,ಮಾಜಿ ಸೈನಿಕರ ಅಧ್ಯಕ್ಷರಾದ ಕರ್ನಲ್ ರೊಡ್ರಿಗಸ್ ,ಕಾರ್ಯದರ್ಶಿ ಗಣೇಶ ರಾವ್, ಪರಮೇಶ್ವರ, ಕೆ ಸುಭಾಸ್, ಗಣಪಯ್ಯ ಉಡುಪಿ, ಜೆಯಾಂಟ್ಸ್ ಅಧ್ಯಕ್ಷರಾದ ಲಕ್ಷೀಕಾಂತ್ ಬೆಸ್ಕೊರ್, ಹಿರಿಯ ನಾಗರಿಗ ಸಮಿತಿ ಸದಸ್ಯರು, ಮತ್ತು ಪಾಧಿಕಾರಿಗಳು ಹಾಗು 40 ಕ್ಕೊ ಹೆಚ್ಚಿನ ಮಾಜಿ ಸೈನಿಕರು ಉಪಸ್ಥಿತರಿದ್ದರು.