ದಸಂಸ ಹಾಗೂ ಅಂಬೇಡ್ಕರ್ ಯುವಸೇನೆ ವತಿಯಿಂದ ಸಚಿವರಿಗೆ ಸನ್ಮಾನ

ಉಡುಪಿ( ಉಡುಪಿ ಟೈಮ್ಸ್ ವರದಿ) : ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವಸೇನೆಯ ನಾಯಕರುಗಳು ಉಡುಪಿ ಪ್ರವಾಸಿ ಮಂದಿರದಲ್ಲಿ ಶನಿವಾರ ಸನ್ಮಾನಿಸಿದರು.

ಸಚಿವ ಕೋಟಾ ಜೊತೆ ನಡೆದ ಸಮಾಲೋಚನ ಸಭೆಯಲ್ಲಿ ಉಡುಪಿ ಜಿಲ್ಲೆಗೆ ಒಂದು ಸುಸಜ್ಜಿತ ಅಂಬೇಡ್ಕರ್ ಭವನದ ನಿರ್ಮಾಣ,ದಲಿತ ಕುಟುಂಬದ ವಾರ್ಷಿಕ ಆದಾಯವಿತಿ ಹೆಚ್ಚಳ,ಡಿ.ಸಿ ಮನ್ನಾ ಭೂಮಿಯನ್ನು ಅರ್ಹ ಭೂರಹಿತ ಫಲಾನುಭವಿಗಳಿಗೆ ಹಂಚ್ಚಿಕೆ,ಕೊರಗ ಸಮುದಾಯದ ಅಭಿವೃದ್ಧಿಗೆ ರೂಪಿಸಲಾದ ಯೋಜನೆಯನ್ನು ಇತರ ಜಾತಿಯವರ ಪಾಲಾಗುತ್ತಿರುವ ಬಗ್ಗೆ, ಬ್ಯಾಕ್‌ಲಾಗ್ ಹುದ್ದೆಯನ್ನಯ ಶೀರ್ಘದಲ್ಲಿ ಭರ್ತಿಗೊಳಿಸವಂತೆ ಹಾಗೂ ಕುಂದಾಪುರ ಬೈಂದೂರು ತಾಲೂಕಿನ ದಲಿತರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಜಯನ್ ಮಲ್ಪೆ ,ನಿವೃತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲದಾಸ್ ಬನ್ನಂಜೆ,ದಲಿತ ಮುಖಂಡರುಗಳಾದ ಮಂಜುನಾಥ ಗಿಳಿಯಾರು, ವಾಸುದೇವ ಬನ್ನಂಜೆ,ರಾಜು ಬೆಟ್ಟಿನಮನೆ,ಸಂಜೀವ ಬಲ್ಕೂರು, ಅಂಬೇಡ್ಕರ್ ಯುವಸೇನೆಯ ಹರೀಶ್ ಸಲ್ಯಾನ್,ಸಂತೋಷ್ ಕಪ್ಪೆಟ್ಟು ,ಗುಣವಂತ ತೊಟ್ಟಂ,ಸುಮಿತ್ ನೆರ್ಗಿ,ದಿನೇಶ್ ಮೂಡಬೆಟ್ಟು, ರಾಮೋಜಿ ಬಲರಾಮನಗರ, ಮೋಹನ್‌ದಾಸ್ ಚಿಟ್ಪಾಡಿ,ಗೀತಾ ಸುರೇಶ್,ಚೈತ್ರ,ನರಸಿಂಹ ಹಳಗೇರಿ,ಪ್ರಭಾಕರ್ ಕುಂದಾಪುರ,ಹಾಗೂ ನಾಗರಾಜ ಉಪ್ಪುಂದ ಮುಂತಾದವರು ಭಾಗವಹಿಸಿದ್ದರು. ಕುಮಾರ್ ಕೋಟಾ ಸ್ವಾಗತಿಸಿ, ಗೋಪಾಲ ಗಿಳಿಯಾರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!