ಮಣಿಪಾಲ: ಚೆಕ್ ಬೌನ್ಸ್ ವಿಚಾರಕ್ಕೆ ಪ್ರಕರಣ, ವ್ಯಕ್ತಿಗೆ ಜೀವ ಬೆದರಿಕೆ
ಮಣಿಪಾಲ ಆ.13( ಉಡುಪಿ ಟೈಮ್ಸ್ ವರದಿ) : ಚೆಕ್ ಬೌನ್ಸ್ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಈ ಬಗ್ಗೆ ಪ್ರಭಾಕರ. ಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪ್ರಭಾಕರ ಜಿ. ಅವರು,
ಕ್ಲಾಸಿಕ್ ಬಿಲ್ಡರ್ಸ್ ಕನ್‌ಸ್ಟ್ರಕ್ಷನ್ ಹಾಗೂ ಕಟ್ಟಡ ಸಾಮಾಗ್ರಿ ಪೂರೈಸುವ ವ್ಯವಹಾರವನ್ನು ಮಾಡಿಕೊಂಡಿದ್ದರು.
ಕಳೆದ 3 ತಿಂಗಳ ಹಿಂದೆ ಮಧ್ಯವರ್ತಿ ಜಸ್ವಂತ್ ಸಿಂಗ್ ಎಂಬವರ ಮುಖಾಂತರ ಅಂಬಾಗಿಲಿನ ಗಿಯಾನ್ ಕನ್‌ಸ್ಟ್ರಕ್ಷನ್‌ನ ರಾಘವೇಂದ್ರರವರಿಗೆ 6 ಲೋಡ್ ಕೆಂಪುಕಲ್ಲನ್ನು ಪೂರೈಸಿದ್ದರು. ರಾಘವೇಂದ್ರರವರು ಈ ಕೆಂಪುಕಲ್ಲಿಗೆ ಸಂಬಂಧಿಸಿದ 89,100 ರೂ ಹಣವನ್ನು ನೀಡಲು ಬಾಕಿ ಇರಿಸಿಕೊಂಡಿದ್ದರು. ಪ್ರಭಾಕರ್. ಜಿ ರವರು ಜಸ್ವಂತ್ ಮುಖಾಂತರ ಹಣವನನ್ನು ಕೇಳಿದಾಗ ಹಣವನ್ನು ನೀಡದೇ ಕಳೆದ 1 ತಿಂಗಳ ಹಿಂದೆ 40 ಸಾವಿರ ರೂ ಚೆಕ್ ನೀಡಿದ್ದರು. ಆದರೆ ಈ ಚೆಕ್ ಬೌನ್ಸ್ ಆಗಿರುತ್ತದೆ. ನಂತರ ಪ್ರಭಾಕರ ಅವರು ರಾಘವೇಂದ್ರ ರವರನ್ನು ಸಂಪರ್ಕಿಸಿ ಬಾಕಿ ಹಣವನ್ನು ನೀಡುವಂತೆ ಕೇಳಿಕೊಂಡಗಲೂ ಆತನು ಹಣ ನೀಡಲು ಸತಾಯಿಸುತ್ತಿದ್ದನು.
ಈ ನಡುವೆ ನಿನ್ನೆ (ಆ.12) ಸಂಜೆ ವೇಳೆ ಗೆ ರಾಜೇಂದ್ರರವರ ಜೊತೆಗೆ ಶಿವಳ್ಳಿ ಗ್ರಾಮದ ಕಕ್ಕುಂಜೆಯಲ್ಲಿನ ಕಛೇರಿಯಲ್ಲಿದ್ದಾಗ ಆರೋಪಿ ರಾಘವೆಂದ್ರನು, ವಿಶು ಅಂಬಲಪಾಡಿ, ಗುರುಪ್ರಸಾದ್ ಹಾಗೂ ಇತರ ಸುಮಾರು 7 ಜನರೊಂದಿಗೆ ಕಛೇರಿಯ ಗೇಟ್ ಬಳಿ ಬಂದು ಗೇಟ್ ಬಳಿ ನಿಂತಿದ್ದ . ಚಾಲಕ ಸುರೇಶ್ ರವರನ್ನು ತಳ್ಳಿಕೊಂಡು ಕಚೇರಿಯ ಜಾಗಕ್ಕೆ ಅಕ್ರಮವಾಗಿ ಒಳ ಪ್ರವೇಶಿಸಿದ ರಾಘವೆಂದ್ರನು ಪ್ರಭಾಕರ ಅವರೊಂದಿಗೆ ಜಗಳ ಮಾಡಿ ಜೀವ ತೆಗೆಯುವುದಾಗಿ ” ಎಂದು ಬೆದರಿಸಿರುತ್ತಾನೆ. ಅಲ್ಲದೆ ಅಡ್ಡಗಟ್ಟಿ ನಿಲ್ಲಿಸಿ ಬಾಕಿ ಇರುವ ಹಣವನ್ನು ಕೇಳಿದರೆ ಜೇವ ತೆಗೆಯುವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.