ಜಾಗತಿಕ ಮಟ್ಟದಲ್ಲಿ ಕುಂದ ಗನ್ನಡಿಗರ ಸಾಧನೆ, ಪರಿಶ್ರಮ ಅಪಾರ: ಕೋಟ ಶ್ರೀನಿವಾಸ ಪೂಜಾರಿ
ಬೈಂದೂರು (ಉಡುಪಿ ಟೈಮ್ಸ್ ವರದಿ): ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ವತಿಯಿಂದ ಆನ್‌ಲೈನ್ ಮೂಲಕ ಇತ್ತೀಚಿಗೆ ನಡೆಯಿತು. ಈ ಕಾರ್ಯಕ್ರಮ ವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಭಾಷೆ ಕೇವಲ ಸಂವಹನಕ್ಕಾಗಿ ಮಾತ್ರವಲ್ಲ ಅದು ಸಂಸ್ಕೃತಿಯ ಪ್ರತೀಕ. ಜಾಗತಿಕ ಮಟ್ಟದಲ್ಲಿ ಕುಂದಗನ್ನಡಿಗರ ಸಾಧನೆ, ಪರಿಶ್ರಮ ಅಪಾರವಾಗಿದೆ. ಈ ನೆಲೆಯಲ್ಲಿ ನಾಡು ನುಡಿಯ ಚಿಂತನೆ ಪರಂಪರೆ ಆಚರಣೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಭಾಗವಹಿಸಿದ್ದರು. ಈ ಸಂದರ್ಭ ವಿಶ್ವ ಕನ್ನಡ ವ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷ ರಾಘವೇಂದ್ರ ಕಂಬ್ಲು, ಭಾಸ್ಕರ ಕೊಗ್ಗ ಕಾಮತ್, ಸತೀಶ ಪೈ ರೂಪಕಲಾ ಕುಂದಾಪುರ, ಮಂಗಳೂರು ಪೊಲೀಸ್ ಅಧಿಕಾರಿ ರಾಘವೇಂದ್ರ ಎಮ್, ಉದ್ಯಮಿ ಗೋವಿಂದ ಬಾಬು ಪೂಜಾರಿ, ಉದ್ಯಮಿ ಇಬ್ರಹಿಂ ಗಂಗೊಳ್ಳಿ , ಮಹಾಪೋಷಕರಾದ ವರದರಾಜ್ ಶೆಟ್ಟಿ, ಪ್ರವೀಣ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಮೀರಾನ್ ಸಾಹೇಬ್, ಸಾಧನ್‌ದಾಸ್, ದಿನೇಶ ದೇವಾಡಿಗ, ಸುಧಾಕರ ಪೂಜಾರಿ, ಸುಜೀತ್ ಶೆಟ್ಟಿ, ವಿವಿದ ದೇಶದ ಪ್ರತಿನಿಧಿಗಳಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ದೀಪಕ್ ಶೆಟ್ಟಿ,ಎನ್. ರಮಾನಂದ, ಸುರೇಂದ್ರ ಶೆಟ್ಟಿ, ಸಂತೋಷ ಶೆಟ್ಟಿ ಆರ್ಡಿ, ಮೊಹಿಸೀನ್ ಬೈಂದೂರು, ಪ್ರದೀಪ ಶೆಟ್ಟಿ, ಕಮಲಾಕ್ಷ ಅಮೀನ್, ಸುರೇಶ್ ರಾವ್ ನೇರಂಬಳ್ಳಿ, ಪ್ರವೀಣ್, ಶೀನ ದೇವಾಡಿಗ ತ್ರಾಸಿ, ಸುಧಾಕರ ಶೆಟ್ಟಿ ಹುಂತರಿ, ಪ್ರಕಾಶ ನಾಯ್ಕ ಕೋಣಿ, ರತನ್ ಬಿಜೂರು , ವಿಘ್ನೇಶ ದುಬೈ ಉಪಸ್ಥಿತರಿದ್ದರು