ಮಲ್ಪೆ: ರಾಜ್ಯದ ಪ್ರಪ್ರಥಮ ಅಡ್ವೆಂಚರ್ ವಿಂಚ್ ಪ್ಯಾರಾಸೈಲಿಂಗ್ ಬೋಟ್‌ಗೆ ಚಾಲನೆ
ಮಲ್ಪೆ (ಉಡುಪಿ ಟೈಮ್ಸ್ ವರದಿ): ಕೇಂದ್ರ ಸರ್ಕಾರದ ಸಿ ಆರ್ ಝೆಡ್ ಕಾಯ್ದೆ ತಿದ್ದುಪಡಿಯಿಂದ ಕರಾವಳಿ ತೀರದ ಜನರು ತಮ್ಮ ಜಾಗ ಅಥವಾ ಮನೆಯ ಭಾಗದಲ್ಲಿ ಹೋಂಸ್ಟೇ ಮಾಡಿ, ಪ್ರವಾಸಿ ಗರಿಗೆ ಉತ್ತಮ ಖಾದ್ಯಗಳನ್ನು ಒದಗಿ ಸುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಅವಕಾಶವಿದ್ದು ಆಸಕ್ತರಿಗೆ ಎಲ್ಲ ವ್ಯವಸ್ಥೆಯನ್ನು ಸಂಬಂಧ ಪಟ್ಟ ಇಲಾಖೆ ಮೂಲಕ ಮಾಡಿ ಕೊಡಲಾಗುವುದು ಎಂದು ಶಾಸಕ ರಘುಪತಿ ತಿಳಿಸಿದರು.
ಮಲ್ಪೆ ಬೀಚ್‌ನಲ್ಲಿ ವಾಟರ್ ಸ್ಪೋರ್ಟ್ಸ್ ವತಿಯಿಂದ ಒಂದು ಕೋಟಿ ರೂ. ವೆಚ್ಚದ ರಾಜ್ಯದ ಪ್ರಪ್ರಥಮ ಅಡ್ವೆಂಚರ್ ವಿಂಚ್ ಪ್ಯಾರಾಸೈಲಿಂಗ್ ಬೋಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು ಸ್ಥಳೀಯರ ಸಹಕಾರದಿಂದ ಮಲ್ಪೆ ಮತ್ತು ಪಡುಕರೆ ಬೀಚ್ ಅನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು , ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ ಪಡುಕೆರೆ ಬಳಿ ವಾಕಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ರೂ 20 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲದೆ ಸೀ ವಾಕ್ ಭಾಗದಿಂದ ಪಡುಕೆರೆಗೆ ನೇರ ಸಂಚಾರ ವ್ಯವಸ್ಥೆ ನಿಟ್ಟಿನಲ್ಲಿ ತೂಗು ಸೇತುವೆ ಅಥವಾ ಕೇಬಲ್ ಕಾರಿನ ವ್ಯವಸ್ಥೆಯನ್ನು ಮಾಡಲು ಚಿಂತಿಸಲಾಗಿದೆ ಎಂದವರು ತಿಳಿಸಿದರು ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ. ಮತ್ತು ಉಡುಪಿ ಮೀನು ಮಾರಾಟ ಫಡರೇಶನಿನ ಅಧ್ಯಕ್ಷ ಯಶ್ ಪಾಲ್ ಎ. ಸುವರ್ಣ, ನಗರಸಭಾಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಷಾ ಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ನಗರಾಭಿ ವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಗರಸಭೆ ಸದಸ್ಯರಾದ ಮಲ್ಪೆ ಸೆಂಟ್ರಲ್ ವಾರ್ಡ್ ನ ಎಡ್ಲಿನ್ ಕರ್ಕಡ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಗರಸಭೆ ಸದಸ್ಯರಾದ ಮಲ್ಪೆ ಸೆಂಟ್ರಲ್ ವಾರ್ಡ್ ನ ಎಡ್ಲಿನ್ ಕರ್ಕಡ, ಕೊಡವೂರು ವಾರ್ಡ್ ನ ವಿಜಯ ಕೊಡವೂರು, ಕಲ್ಮಾಡಿ ವಾರ್ಡ್ ನ ಸುಂದರ ಜೆ ಕಲ್ಮಾಡಿ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಮಂಜು ಕೊಳ, ಮಂತ್ರ ಟೂರಿಸಂನ ಆಡಳಿತ ನಿರ್ದೇಶಕ ಸುಧೀರ್ ಶೆಟ್ಟಿ , ಮಾಜಿ ನಗರ ಸಭೆ ಸದಸ್ಯರಾದ ಪಾಂಡುರಂಗ ಮಲ್ಪೆ , ವಿಜಯ ಕುಂದರ್, ಜಿಲ್ಲಾ ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ವಿನಯ್ ಕರ್ಕೇರ, ಜ್ಞಾನಜ್ಯೋತಿ ಭಜನಾ ಮಂದಿರದ ಅಧ್ಯಕ್ಷ ವಿಜಯ ತಿಂಗಳಾಯ, ಶಿವಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷ ಶಂಕರ ಸುವರ್ಣ, ಮಲ್ಪೆ ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷ ರವಿ ಕರ್ಕೇರ, ತೊಟ್ಟಂ ಪಂಡರಿನಾಥ ಭಕ್ತಿ ಉದಯ ಭಜನಾ ಮಂದಿರದ ಅಧ್ಯಕ್ಷ ಸುಭಾಷ್ ಸಾಲ್ಯಾನ್, ಕೊಳ ಬಾಲಕರ ರಾಮ ಭಜನಾ ಮಂದಿರದ ಅಧ್ಯಕ್ಷ ಉದಯ ಕುಂದರ್ ಉಪಸ್ಥಿತರಿದ್ದರು.
ಏನಿದು ಪ್ಯಾರಾಸೈಲಿಂಗ್?: ಪ್ಯಾರಾಸೈಲಿಂಗ್ ನಲ್ಲಿ ಸಮುದ್ರದ ಮಧ್ಯೆ ಬೋಟ್ ನ ಮೇಲಿಂದಲೇ ಹಾರಾಟ ನಡೆಸಿ, ಬೋಟ್ ನಲ್ಲೆ ಲ್ಯಾಂಡ್ ಆಗಬಹುದು. ಗೋವಾ, ಮಹಾರಾಷ್ಟ್ರ ,ಥೈಲ್ಯಾಂಡ್ ನಲ್ಲಿ ಈಗಾಗಲೇ ಜನಪ್ರಿಯಗೊಂಡಿದ್ದು, ವಿಂಚ್ ಪ್ಯಾರಾಸೈಲಿಂಗ್ ನಲ್ಲಿ ಪ್ರವಾಸಿಗರಿಗೆ ಬೋಟ್ ರೈಡಿಂಗ್ ಮತ್ತು ಹಾರಾಟ ಎರಡು ಒಂದರಲ್ಲೇ ಸಿಕ್ಕಿದಂತಾಗುತ್ತದೆ. ಬೋಟ್ ನಲ್ಲಿ ಸುಮಾರು 15 ಮಂದಿಗೆ ಅವಕಾಶವಿದ್ದು 2 ಅಥವಾ 3 ಮಂದಿ ಮೇಲೆ ಹಾರಾಟ ನಡೆಸಬಹುದು. 350 ಅಶ್ವಶಕ್ತಿಯುಳ್ಳ ಬೋಟ್ ಹೈ ಸ್ಪೀಡ್ ನಲ್ಲಿ ಚಲಿಸಿ, ಸುಮಾರು 100 ಮೀಟರ್ ಎತ್ತರದಲ್ಲಿ 90 ಡಿಗ್ರಿ ಮೇಲೆ ಕೊಂಡೊಯ್ಯುತ್ತದೆ, ಅರ್ಧ ನೀರಿನಲ್ಲೂ ಮುಳುಗಿಸುವಾಗ ಸಮುದ್ರದಲ್ಲಿ ಈಜುತ್ತಾ ಸಾಗುವ ಅನುಭವ ಸಿಗುತ್ತದೆ.