ಉಡುಪಿ: ದೀಪಾವಳಿ ಪ್ರಯುಕ್ತ “ಆಲ್ವಿನ್ ಬೇಕರಿ” ಯಲ್ಲಿ ವಿಶೇಷ ಸಿಹಿ ತಿಂಡಿಗಳ ಮಾರಾಟ
ಉಡುಪಿ(ಉಡುಪಿ ಟೈಮ್ಸ್ ವರದಿ): ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಹೆಸರಾಂತ ಬೇಕರಿ ಉತ್ನನ್ನಗಳ ಬೃಹತ್ ಮಳಿಗೆಯಾದ “ಆಲ್ವಿನ್ ಬೇಕರಿ”ಯಲ್ಲಿ ದೀಪಾವಳಿ ಪ್ರಯುಕ್ತ ಉತ್ತಮ ಗುಣಮಟ್ಟದ ಸಿಹಿ ತಿಂಡಿಗಳು ಮತ್ತು ಬೇಕರಿ ಉತ್ಪನ್ನಗಳು ಆಕರ್ಷಕ ದರದಲ್ಲಿ ಲಭ್ಯವಿದೆ. ಈ ಬಾರಿಯ ದೀಪಾವಳಿಗೆ ವಿಶೇಷ ಸಿಹಿ ತಿಂಡಿಗಳು ಮತ್ತು ಸ್ವೀಟ್ ಬಾಕ್ಸ್ ಗಳನ್ನು ತಯಾರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಮ್ಮದೇ ಸ್ವಚ್ಛ ವಾತಾವರಣದ ಫಾಕ್ಟರಿಯಲ್ಲಿ ಉತ್ಕೃಷ್ಟ ದರ್ಜೆಯಿಂದ ತಯಾರಿಸಲ್ಪಟ್ಟ ಸಿಹಿ ತಿನಸುಗಳನ್ನು, ನೇರವಾಗಿ ತಮ್ಮ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕಳೆದ ಮೂವತ್ತು ವರ್ಷಗಳಿಂದ ಗ್ರಾಹಕರ ಮೆಚ್ಚುಗೆ ಗಳಿಸಿದೆ. ದೀಪಾವಳಿ ಪ್ರಯುಕ್ತ ನಿಮ್ಮ ಪ್ರೀತಿ ಪಾತ್ರರಾದವರಿಗೆ ವಿಶೇಷ ಮತ್ತು ಅತ್ಯುತ್ತಮ ಗುಣಮಟ್ಟದ ವಿವಿಧ ಬಗೆಯ ಸಿಹಿ ತಿಂಡಿಗಳನ್ನು ಸ್ವೀಟ್ ಬಾಕ್ಸ್ ಮೂಲಕ ನೀಡಲು “ಆಲ್ವಿನ್ ಬೇಕರಿ” ಯಲ್ಲಿ ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಬೇಕರಿ ಉತ್ಪನ್ನ ಗಳ ತಯಾರಿಕೆಯಲ್ಲಿ ಮತ್ತು ಮಾರಾಟದಲ್ಲಿ ಹಲವಾರು ವರ್ಷಗಳ ಅನುಭವವಿರುವ ಮತ್ತು ಎಲ್ಲ ಬಗೆಯ ಸಿಹಿತಿನಿಸುಗಳ ಸಂಗ್ರಹವಿರುವ “ಆಲ್ವಿನ್ ಬೇಕರಿ” ಸಂಪೂರ್ಣ ಹವಾನಿಯಂತ್ರಿತವಾಗಿದೆ. ಇಲ್ಲಿ ದೊರಕುವ ಎಲ್ಲ ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಇರುವ ಅಲ್ವಿನ್ ಬೇಕರಿಯು, ತನ್ನಲ್ಲಿ ಬರುವ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ನೀಡಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ.