ಮೂಡುಬೆಳ್ಳೆ: ಬೇಕ್ ಲೈನ್ ಬೇಕರಿ ಶುಭಾರಂಭ – ದೀಪಾವಳಿ ಪ್ರಯುಕ್ತ 10 % ರಿಯಾಯಿತಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಈ ಬಾರಿಯ ದೀಪಾವಳಿಯನ್ನು ಹೊಸ ಮಾದರಿಯ ಸಿಹಿ ಸಿಹಿಯಾದ ಉತ್ಪನ್ನದೊಂದಿಗೆ ಗ್ರಾಹಕರಿಗೆ ಒದಗಿಸಲು ಮೂಡುಬೆಳ್ಳೆ ಮುಖ್ಯರಸ್ತೆಯ ಸಬೀನಾ ಕಾಂಪ್ಲೆಕ್ಸ್ ನಲ್ಲಿ ನೂತನ ಬೇಕರಿ ಸಂಸ್ಥೆ ‘ಬೇಕ್ ಲೈನ್’ ಇಂದು ಉದ್ಘಾಟನೆಗೊಂಡಿತು.
ಉದ್ಘಾಟನಾ ಮತ್ತು ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಸಿಹಿತಿನಿಸುಗಳ ಖರೀದಿಯ ಮೇಲೆ ಶೇ.10 ರಿಯಾಯಿತಿ ನೀಡಲಾಗುದೆಂದು ಎಂದು ಪ್ರಕಟಣೆ ತಿಳಿಸಿದೆ
ಇಂದಿನಿಂದ ಗ್ರಾಹಕರಿಗೆ ಸಿಹಿ ಉಣಿಸಲು ಶುಭಾರಂಭಗೊಂಡ ಬೇಕರಿ ಬೇಕ್ ಲೈನ್, ತನ್ನ ಉತ್ಕೃಷ್ಟ ಗುಣಮಟ್ಟದ ಸಿಹಿ ತಿನಿಸುಗಳು, ಆಕರ್ಷಕ ಡಿಸ್ಪ್ಲೇಗಳನ್ನೊಳಗೊಂಡ ಅತ್ಯುತ್ತಮವಾದ ಒಳಾಂಗಣ ಹೊಂದಿದ್ದು, ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಮೂಡುಬೆಳ್ಳೆಯಲ್ಲಿ ಪ್ರಪ್ರಥಮ ಬಾರಿಗೆ ಪೇಸ್ಟ್ರಿ ದೊರೆಯುವ ಏಕೈಕ ಬೇಕರಿ ಇದಾಗಿದ್ದು, ಎಲ್ಲಾ ತರದ ಸಿಹಿತಿನಿಸುಗಳು, ವಿಶೇಷ ವಿನ್ಯಾಸದ ಕೇಕ್, ಸ್ವೀಟ್ಸ್ ಪ್ಯಾಕ್, ಕೂಲ್ ಡ್ರಿಂಕ್ಸ್ ಗಳು ಲಭ್ಯವಿದೆ. ಮೂಡುಬೆಳ್ಳೆ ಮತ್ತು ಆಸುಪಾಸಿನ ಗ್ರಾಹಕರು ದೀಪಾವಳಿಯ ವಿಶೇಷ ರಿಯಾಯಿತಿ ಮಾರಾಟವನ್ನು ಸದುಪಯೋಗಪಡಿಸುವಂತೆ ‘ಬೇಕ್ ಲೈನ್’ ಪ್ರಕಟಣೆ ತಿಳಿಸಿದೆ.