ಮಲ್ಪೆ: ನ.14ರಿಂದ ಸಮುದ್ರದ ಅಲೆಗಳ ಜೊತೆ ಆಡುವ ಸಾಹಸಿಗಳಿಗೆ ವಿಂಚ್ ಪ್ಯಾರಾಸೈಲಿಂಗ್ ಪ್ರಾರಂಭ

ಉಡುಪಿ(ಉಡುಪಿ ಟೈಮ್ಸ್ ವರದಿ): ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರಿಗೆ ಇನ್ನುಮುಂದೆ ಅದ್ಭುತ ಅನುಭವ ಸಿಗಲಿದೆ. ಸಮುದ್ರದಲ್ಲಿ ಸಾಹಸ ಮಾಡಬೇಕೆನ್ನುವ ಹಂಬಲ ಇರುವವರಿಗೆ ಇದೀಗ ಸುವರ್ಣಾವಕಾಶ. ಇಲ್ಲಿನ ‘ಬೀಚ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್’ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮಲ್ಪೆ ಬೀಚ್ ನಲ್ಲಿ ವಿಂಚ್ ಪ್ಯಾರಾಸೈಲಿಂಗ್ ಬೋಟ್ ಆರಂಭಗೊಳ್ಳಲಿದೆ.

ಇದರ ಉದ್ಘಾಟನಾ ಸಮಾರಂಭವು ಮಲ್ಪೆ ಬೀಚ್ ನಲ್ಲಿ ನ. 14 ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಪ್ಯಾರಾಸೈಲಿಂಗ್ ಸಮುದ್ರದ ಮಧ್ಯೆ ಬೋಟ್ ನ ಮೇಲಿಂದಲೇ ಹಾರಾಟ ನಡೆಸಿ, ಬೋಟ್ ನಲ್ಲೆ ಲ್ಯಾಂಡ್ ಆಗಬಹುದು. ಗೋವಾ, ಮಹಾರಾಷ್ಟ್ರ ,ಥೈಲ್ಯಾಂಡ್ ನಲ್ಲಿ ಈಗಾಗಲೇ ಜನಪ್ರಿಯಗೊಂಡಿದ್ದು, ವಿಂಚ್ ಪ್ಯಾರಾಸೈಲಿಂಗ್ ನಲ್ಲಿ ಪ್ರವಾಸಿಗರಿಗೆ ಬೋಟ್ ರೈಡಿಂಗ್ ಮತ್ತು ಹಾರಾಟ ಎರಡು ಒಂದರಲ್ಲೇ ಸಿಕ್ಕಿದಂತಾಗುತ್ತದೆ. ಬೋಟ್ ನಲ್ಲಿ ಸುಮಾರು 15 ಮಂದಿಗೆ ಅವಕಾಶವಿದ್ದು 2 ಅಥವಾ 3 ಮಂದಿ ಮೇಲೆ  ಹಾರಾಟ ನಡೆಸಬಹುದು. 350 ಅಶ್ವಶಕ್ತಿಯುಳ್ಳ ಬೋಟ್ ಹೈ ಸ್ಪೀಡ್ ನಲ್ಲಿ  ಚಲಿಸಿ, ಸುಮಾರು 100 ಮೀಟರ್ ಎತ್ತರದಲ್ಲಿ 90 ಡಿಗ್ರಿ ಮೇಲೆ ಕೊಂಡೊಯ್ಯುತ್ತದೆ, ಅರ್ಧ ನೀರಿನಲ್ಲೂ ಮುಳುಗಿಸುವಾಗ ಸಮುದ್ರದಲ್ಲಿ ಈಜುತ್ತಾ ಸಾಗುವ ಅನುಭವ ಸಿಗುತ್ತದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ಹಾಗೂ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಗರಸಭೆ ಸದಸ್ಯರಾದ ಮಲ್ಪೆ ಸೆಂಟ್ರಲ್ ವಾರ್ಡ್ ನ ಎಡ್ಲಿನ್ ಕರ್ಕಡ,

ಕೊಡವೂರು ವಾರ್ಡ್ ನ ವಿಜಯ ಕೊಡವೂರು, ಕಲ್ಮಾಡಿ ವಾರ್ಡ್ ನ ಸುಂದರ ಜೆ ಕಲ್ಮಾಡಿ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಮಂಜು ಕೊಳ,  ಮಂತ್ರ ಟೂರಿಸಂನ ಆಡಳಿತ ನಿರ್ದೇಶಕ ಸುಧೀರ್ ಶೆಟ್ಟಿ , ಮಾಜಿ ನಗರ ಸಭೆ ಸದಸ್ಯರಾದ ಪಾಂಡುರಂಗ ಮಲ್ಪೆ , ವಿಜಯ ಕುಂದರ್, ಜಿಲ್ಲಾ ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ವಿನಯ್ ಕರ್ಕೇರ, ಜ್ಞಾನಜ್ಯೋತಿ ಭಜನಾ ಮಂದಿರದ ಅಧ್ಯಕ್ಷ ವಿಜಯ ತಿಂಗಳಾಯ, ಶಿವಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷ ಶಂಕರ ಸುವರ್ಣ, ಮಲ್ಪೆ ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷ ರವಿ ಕರ್ಕೇರ, ತೊಟ್ಟಂ ಪಂಡರಿನಾಥ ಭಕ್ತಿ ಉದಯ ಭಜನಾ ಮಂದಿರದ ಅಧ್ಯಕ್ಷ ಸುಭಾಷ್ ಸಾಲ್ಯಾನ್, ಕೊಳ ಬಾಲಕರ ರಾಮ ಭಜನಾ ಮಂದಿರದ ಅಧ್ಯಕ್ಷ ಉದಯ ಕುಂದರ್ ಉಪಸ್ಥಿತರಿರುವರು. 

Leave a Reply

Your email address will not be published. Required fields are marked *

error: Content is protected !!