51 ವರ್ಷವಾದರೂ ಬುದ್ಧಿವಂತಿಕೆ,ಪ್ರೌಢಿಮೆ ಮತ್ತು ಜವಾಬ್ದಾರಿಗಳು ಬಂದಿಲ್ಲವೇ ? : ಬಿಜೆಪಿ ಟೀಕೆ

ನವದೆಹಲಿ ಜು.3: ಲಸಿಕೆ ಲಭ್ಯತೆಯ ಕುರಿತು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯವರ ಪ್ರಶ್ನೆಗೆ ಅಂಕಿ ಅಂಶಗಳ ಸಹಿತ ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ. ಜುಲೈ ತಿಂಗಳು ಆರಂಭವಾಗಿದೆ. ಆದರೆ, ಲಸಿಕೆಗಳು ಬಂದಿಲ್ಲ. ಲಸಿಕೆಗಳು ಎಲ್ಲಿವೆ ಎಂದು ರಾಹುಲ್‌ ಗಾಂಧಿ ಪ್ರಶ್ನೀಸಿದ್ದರು. ಇದೀಗ ಇವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡರು ಹಾಗೂ ಆರೋಗ್ಯ ಸಚಿವರು, ಜುಲೈ ತಿಂಗಳು ಲಭ್ಯವಾಗುವ ಲಸಿಕೆ ಕುರಿತು ಖಚಿತ ಮಾಹಿತಿಯನ್ನು ಗುರುವಾರವೇ ನೀಡಿದ್ದೆ.

ರಾಹುಲ್‌ ಗಾಂಧಿ ಅವರ ಸಮಸ್ಯೆ ಏನು? ಅವರು ಈ ಮಾಹಿತಿಯನ್ನು ಓದಿಲ್ಲವೇ? ಅಥವಾ ಅವರಿಗೆ ಇದು ಅರ್ಥವಾಗುವುದಿಲ್ಲವೇ? ಅಜ್ಞಾನಕ್ಕೆ ಯಾವುದೇ ಲಸಿಕೆ ಇಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ವ್ಯಂಗ್ಯವಾಡಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಅವರು, ‘ಜುಲೈ 1ರಂದು ಲಸಿಕೆಯ 41.60 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ. ಜೂನ್‌ 21ರಿಂದ ಜುಲೈ 1ರವರೆಗೆ 6.85 ಕೋಟಿ ಲಸಿಕೆಗಳನ್ನು ನೀಡಲಾಗಿದೆ. ಅಂದರೆ ಸರಾಸರಿ ಪ್ರತಿ ದಿನ 62 ಲಕ್ಷ ಡೋಸ್‌ಗಳನ್ನು ನೀಡಲಾಗಿದೆ’ ಎಂದು ವಿವರಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್‌ ನಾಯಕನಿಗೆ 51 ವರ್ಷಗಳಾಗಿವೆ. ಆದರೂ, ಪ್ರೌಢಿಮೆ, ಬುದ್ಧಿವಂತಿಕೆ ಮತ್ತು ಜವಾಬ್ದಾರಿಗಳು ಬಂದಿಲ್ಲವೇ ಎಂದು ಜನರು ಪ್ರಶ್ನಿಸುವಂತಾಗಿದೆ’ ಎಂದು ರಾಹುಲ್ ಗಾಂಧಿಯವರನ್ನು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!