ಚಿತ್ರಕೂಟ ಆಯುರ್ವೇದ: ಮಕ್ಕಳ ಆರೋಗ್ಯಯುಕ್ತ ಬೆಳವಣಿಗೆಯ”ಶಿಶು ಪೋಷಕ್” ಉತ್ಪನ್ನಕ್ಕೆ ಹೆಚ್ಚಿದ ಬೇಡಿಕೆ
ಉಡುಪಿ(ಉಡುಪಿ ಟೈಮ್ಸ್ ವರದಿ): ಮಕ್ಕಳ ದೈಹಿಕ ಹಾಗು ಮಾನಸಿಕ ಬೆಳವಣಿಗೆಗೆ ಉತ್ತಮ ಪೌಷ್ಟಿಕ ಆಹಾರ ಅತಿ ಅವಶ್ಯಕ, ಸ್ವಚ್ಛ ಪರಿಸರದಲ್ಲಿ ಪೌಷ್ಠಿಕತೆಯಿಂದ ಕೂಡಿದ ಶಿಶು ಉತ್ಪನ್ನಗಳು ಮಕ್ಕಳ ಆರೋಗ್ಯಯುಕ್ತ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಇದನ್ನ ಮನಗಂಡ ಹಲವಾರು ವರ್ಷಗಳಿಂದ ಆಯುರ್ವೇದ ವಲಯದಲ್ಲಿ ಪ್ರಖ್ಯಾತಿಯಾದ ಆಲೂರಿನ ಚಿತ್ರಕೂಟ ಆಯುರ್ವೇದ ಸಂಸ್ಥೆಯು ತಯಾರಿಸಿದ ಉತ್ಕ್ರಷ್ಟ ಉತ್ಪನ್ನ ಶಿಶು ಪೋಷಕ್ ಉತ್ತಮ ಫಲಿತಾಂಶ ನೀಡಿದೆ ಹಾಗು ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆಯಲ್ಲಿರುವ ಶಿಶು ಆಹಾರವಾಗಿದೆ.
ಶಿಶು ಪೋಷಕ್ ಉತ್ಪನ್ನವು ಉತ್ತಮ ಗುಣಮಟ್ಟದ ಆಯ್ದ ಧಾನ್ಯಗಳಿಂದ ಸ್ವಚ್ಛ ಹಾಗು ಆರೋಗ್ಯಕರ ಪ್ರದೇಶಗಳಲ್ಲಿ ತಯಾರಿಸಲಾಗುತ್ತಿದೆ. ಶಿಶು ಪೋಷಕ್ 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡುವ ಅಹಾರ ವಾಗಿದ್ದು ಇದರಲ್ಲಿ ಯಾವುದೇ ರಾಸಾಯನಿಕ ,ಸಂರಕ್ಷಕಗಳನ್ನು ಒಳಗೊಂಡಿಲ್ಲ.
ಉಪಯೋಗಿಸುವ ಹೆಚ್ಚಿನ ಧಾನ್ಯಗಳನ್ನು ಸಾವಯದ ಮೂಲಕ ಬೆಳೆಸಿದ್ದು, ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾಗಿದೆ. ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುವ ಪೋಷಕಾಂಶಗಳು ಇದರಲ್ಲಿದ್ದು ಇದರಲ್ಲಿ ಬಳಸುವ ಏಕದಳ ,ದ್ವಿದಳ ಧಾನ್ಯಗಳು ,ಸಿರಿಧಾನ್ಯಗಳು ಸರಿಯಾದ ಪ್ರಮಾಣದಲ್ಲಿ ಒಳಗೊಂಡಿರುವುದು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಟ್ಟು ಪ್ರಮಾಣೀಕರಿಸಲಾಗಿದ್ದು ಯಾವುದೇ ಪೋಷಕಾಂಶಗಳನ್ನು ಪ್ರತ್ಯೇಕವಾಗಿ ಸೇರಿಸಿಲ್ಲ.
ಮಗುವಿನ ಮಾನಸಿಕ ಬೆಳವಣಿಗೆ ಬೇಕಾಗಿರುವ ಬ್ರಾಹ್ಮೀ, ಒಣ ಹಣ್ಣುಗಳು, ಇದರಲ್ಲಿ ಬಳಸಲಾಗಿದೆ. ಸಿರಿಧಾನ್ಯಗಳು ಮಗುವಿನ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ದತೆಯನ್ನು ನಿವಾರಿಸುತ್ತದೆ.
ರಾಗಿ ರಿಚ್, ಬನಾನಾ ರಿಚ್, ರೈಸ್ ರಿಚ್ ಹೀಗೆ 3 ವಿಧಗಳಲ್ಲಿ ಮಕ್ಕಳಿಗೆ ರುಚಿಕರವಾದ ಆರೋಗ್ಯದಾಯಕವಾದ “ಶಿಶು ಪೋಷಕ್“ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಈ ಉತ್ಪನ್ನಗಳಲ್ಲಿ ಬ್ರಾಹ್ಮಿ ಯಥೇಚ್ಚವಾಗಿ ಇರುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಇದು ಸಹಕಾರಿಯಾಗುತ್ತದೆ.
ಚಿತ್ರಕೂಟದ “ಶಿಶು ಪೋಷಕ್” ಉತ್ಪನ್ನವು ಎಲ್ಲಾ ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯವಿದೆ ಎಂದು ಚಿತ್ರಕೂಟ ಆಯುರ್ವೇದಿಕ್ ಸಂಸ್ಥೆಯ ಮುಖ್ಯಸ್ಥ ಡಾ| ರಾಜೇಶ್ ಬಾಯಿರಿ ಉಡುಪಿ ಟೈಮ್ಸ್ ಗೆ ತಿಳಿಸಿದ್ದಾರೆ.