ಸಂಸ್ಕೃತ ದಿನಪತ್ರಿಕೆ “ಸುಧರ್ಮ” ಸಂಪಾದಕ ಸಂಪತ್ ಕುಮಾರ್ ನಿಧನ

ಮೈಸೂರು :ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆಯಾದ “ಸುಧರ್ಮ” ದಿನ ಪತ್ರಿಕೆಯ ಸಂಪಾದಕರು ಹಾಗೂ ಮಾಲೀಕರಾದ ಕೆ.ವಿ.ಸಂಪತ್ ಕುಮಾರ್ ಅಯ್ಯಂಗಾರ್ ಅವರು ಇಂದು (ಜೂ 30 ) ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು

ಸಂಪತ್ ಕುಮಾರ್ ಅವರ ತಂದೆ ಪಂಡಿತ್ ವರದರಾಜ ಅಯ್ಯಂಗಾರ್ ಅವರು 1945 ರಲ್ಲಿ ಸುಧರ್ಮ ಮುದ್ರಣಾಲಯ ಪ್ರಾರಂಭಿಸಿ 1970ರಲ್ಲಿ ಸುಧರ್ಮ ಪತ್ರಿಕೆಯನ್ನು ಹೊರತರಲು ಆರಂಭಿಸಿದ್ದರು. ಇವರ ನಿಧನದ ನಂತರ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡ ಸಂಪತ್ ಕುಮಾರ್ ಪತ್ರಿಕೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪತ್ರಿಕೆಯ ಆನ್ ಲೈನ್ ಆವೃತ್ತಿಯನ್ನು ಹೊರತಂದರು.

ಸುಧರ್ಮ ಪತ್ರಿಕೆ ಆರಂಭದ ಸಮಯದಲ್ಲಿ ಓದುಗರ ಸಮಸ್ಯೆ, ಆರ್ಥಿಕ ಸಮಸ್ಯೆ ಇದ್ದರೂ ತಮ್ಮ ಪತ್ನಿ ಜೊತೆ ಪತ್ರಿಕೆಯನ್ನು ಹೊರ ತರುತ್ತಿದ್ದರು. ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನ ಪ್ರಕಟವಾಗುವ ಸುಧರ್ಮ ದಿನಪತ್ರಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಕಳೆದ ವರ್ಷ ಸಂಪತ್ ದಂಪತಿಗಳಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿತ್ತು. ಆದರೆ ಅದು ಪಡೆಯುವ ಮೊದಲೇ ಸಂಪತ್ ರವರು ಇಹಲೋಕ ತ್ಯಜಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!