ಬೆಂಗಳೂರು: ಜು.1ರಿಂದ ಅನಿಯಮಿತ ಮೆಟ್ರೊ ರೈಲು ಸೇವೆ

ಬೆಂಗಳೂರು ಜೂ.30: ನಗರದಲ್ಲಿ ಜು.1ರಿಂದ ಅನಿಯಮಿತ ಮೆಟ್ರೊ ರೈಲು ಸೇವೆ ಆರಂಭಗೊಳ್ಳಲಿದೆ. ಈ ಬಗ್ಗೆ  ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕಟಣೆ ಹೊರಡಿಸಿದ್ದು, ನಾಳೆಯಿಂದ  ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮೆಟ್ರೊ ರೈಲು ಸೇವೆ ಆರಂಭಗೊಳ್ಳಲಿದೆ. ಆದರೆ, ವಾರಾಂತ್ಯ ಕರ್ಫ್ಯೂ ಇರುವುದರಿಂದ ಶನಿವಾರ ಮತ್ತು ಭಾನುವಾರ ಮೆಟ್ರೊ ರೈಲು ಸಂಚಾರ ಇರುವುದಿಲ್ಲ ಎಂದೂ ತಿಳಿಸಿದೆ. 

ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್‌ಗಳಲ್ಲದೆ ಸ್ಮಾರ್ಟ್ ಟೋಕನ್‌ಗಳನ್ನೂ ಬಳಸಿ ಪ್ರಯಾಣಿಸಲು ನಿಗಮ ಅವಕಾಶ ನೀಡಿದೆ. ಹಾಗೂ ಸ್ಮಾರ್ಟ್ ಕಾರ್ಡ್‌ಗಳನ್ನು ನಿಗಮದ ವೆಬ್‌ಸೈಟ್, ಆ್ಯಪ್ ಬಳಸಿ ರಿಚಾರ್ಜ್ ಮಾಡಿ ಕೊಳ್ಳಬಹುದು.ಅಲ್ಲದೆ,ಮೆಟ್ರೊ ನಿಲ್ದಾಣಗಳಲ್ಲಿನ ಕೌಂಟರ್‌ಗಳಲ್ಲಿಯೂ ಎಟಿಎಂ ಕಾರ್ಡ್ ಅಥವಾ ನಗದು ಬಳಸಿ ಖರೀದಿ ಅಥವಾ ರಿಚಾರ್ಜ್ ಮಾಡಿಸಬಹುದು. ಟೋಕನ್‌ಗಳನ್ನು ನಗದು ನೀಡಿ ಅಥವಾ ಸ್ಟಾಟಿಕ್‌ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಖರೀದಿಸ ಬಹುದಾಗಿದೆ.

ಜನದಟ್ಟಣೆಯ ಸಂದರ್ಭದಲ್ಲಿ ಪ್ರತಿ ಐದು ನಿಮಿಷಗಳ ಅಂತರದಲ್ಲಿ, ಜನದಟ್ಟಣೆ ಇಲ್ಲದಾಗ15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. ಆದಾಗ್ಯೂ, ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿ, ರೈಲುಗಳ ಸಂಚಾರ ಸಮಯದಲ್ಲಿನ ಅಂತರವನ್ನು ಮರುಪರಿಶೀಲಿಸಲಾಗುವುದು ಎಂದು ನಿಗಮ ಹೇಳಿದೆ. ಇನ್ನು ಲಾಕ್‌ಡೌನ್ ಸಡಿಲಿಕೆ ನಂತರ, ಬೆಳಿಗ್ಗೆ 7ರಿಂದ 11 ರವರೆಗೆ ಮತ್ತು ಮಧ್ಯಾಹ್ನ‌ 3ರಿಂದ 6ರವರೆಗೆ ದಿನದಲ್ಲಿ 7 ತಾಸು ಮಾತ್ರ ಮೆಟ್ರೊ ರೈಲು ಸಂಚರಿಸುತ್ತಿದ್ದವು. ಇನ್ನು ಮುಂದೆ ಜು.1ರಿಂದ ದಿನದಲ್ಲಿ 11 ತಾಸು ರೈಲು ಸೇವೆ ಇರುತ್ತದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!