ನನಗೆ ಮಾಸಿಕ 5 ಲಕ್ಷ ವೇತನ ಅದರಲ್ಲಿ 2.75 ಲಕ್ಷ ಹಣವನ್ನು ತೆರಿಗೆ ಪಾವತಿಸುತ್ತೇನೆ
ಉತ್ತರ ಪ್ರದೇಶ: ನಾಗರಿಕರು ಜವಾಬ್ದಾರಿಯುತವಾಗಿ ತೆರಿಗೆಯನ್ನು ಪಾವತಿಸಬೇಕು ನಾನು ಕೂಡ ತಪ್ಪದೆ ತೆರಿಗೆಯನ್ನು ಕಟ್ಟುತ್ತೇನೆ, ದೇಶದ ಮೊದಲ ಪ್ರಜೆಯಾಗಿ ನನಗೆ ಮಾಸಿಕ 5 ಲಕ್ಷ ವೇತನ ಪಡೆಯುತ್ತೇನೆ ಅದರಲ್ಲಿ 2.75 ಲಕ್ಷ ಹಣವನ್ನು ತೆರಿಗೆ ಪಾವತಿಸುತ್ತೇನೆ ಎಂದು ರಾಷ್ಟ್ರಪತಿ ರಮಾನಾಥ್ ಕೊವಿಂದ್ ದೇಶದ ನಾಗರಿಕರಿಗೆ ತಿಳಿಸಿದರು.
ತಮ್ಮ ತವರು ರಾಜ್ಯ ಉತ್ತರ ಪ್ರದೇಶಕ್ಕೆ 3ದಿನಗಳ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿಗಳು ಇಲ್ಲಿನ ಜಿನ್ ಜಾಕ್ ರೈಲ್ವೆ ನಿಲ್ದಾಣದ ಬಳಿ ಸ್ಥಳೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ದೇಶದ ನಾಗರಿಕರು ತಪ್ಪದೇ ತೆರಿಗೆ ಕಟ್ಟಬೇಕು ಇದರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ,ಇದಲ್ಲದೆ ನಾನು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಮ್ಮ ಅಧಿಕಾರಿಗಳು ಇಲ್ಲಿ ಸೇರಿರುವ ಶಿಕ್ಷಕರು ಸಂಬಳ ಪಡೆಯುತ್ತಾರೆ ಎಂದರು ನಾವು ನೀವು ತೆರಿಗೆ ಪಾವತಿಸಿದರೆ ಮಾತ್ರ ದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲು ಸಾಧ್ಯ ಎಂದು ಹೇಳುವ ಸಲುವಾಗಿ ಇಲ್ಲಿ ವೇತನದ ವಿಷಯ ಪ್ರಸ್ತಾಪ ಮಾಡಿದೆ ಎಂದು ರಾಮನಾಥ್ ಕೋವಿಂದ್ ತಿಳಿಸಿದರು.