ಕಸದಿಂದ ರಸ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸಕೊಳ್ಳುವ ಅನ್ ಲೈನ್ ಶಿಬಿರದಲ್ಲಿ ಸತ್ಯನಾ ಕೊಡೇರಿ
ಕೋಟ(ಉಡುಪಿ ಟೈಮ್ಸ್ ವರದಿ): ಶಾಲೆಯ ದೀರ್ಘ ಕಾಲದ ರಜೆ ಎನ್ನುವಂತಹದ್ದು ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ವಿದ್ಯಾರ್ಥಿಗಳ ಕೈಚಳಕ ಮಾಯವಾಗಿದೆ, ಸ್ವರ ಜೋರಾಗಿ ಬಾರದಂತೆ ತಡೆ ಹಿಡಿದಿದೆ, ದೇಹದ ಎಲ್ಲ ಅವಯವಗಳು ತೆರೆದುಕೊಳ್ಳದಂತೆ ಕಟ್ಟಿಹಾಕಿದೆ. ಇದಕ್ಕೆಲ್ಲಾ ಕಾರಣ ಕರೋನ. ಇದರಿಂದ ಹೊರಬರಬೇಕಾದರೆ ನಾವೆಲ್ಲ ಜಾಗರೂಕದಿಂದರೋಣ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ ಸತ್ಯನಾ ಕೊಡೇರಿ ಎಚ್ಚರಿಸಿದರು.
ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ಯಶಸ್ವಿ ಕಲಾ ವೃಂದ ಕೊಮೆ, ತೆಕ್ಕಟ್ಟೆ ಇವರ ಜಂಟಿ ಆಶ್ರಯದಲ್ಲಿ ನಡೆದ ರಜಾರಂಗು-೨೧ ಉಚಿತ ಆನ್ ಲೈನ್ ಶಿಬಿರದಲ್ಲಿ ಕೊಡೇರಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಿಗೆ ಕಾರ್ಯದರ್ಶಿ ವೆಂಕಟೇಶ ವೈದ್ಯ ಕ್ರಾಫ್ಟ್ ಪರಿಕರವನ್ನು ಹಸ್ತಾಂತರಿಸಿದರು.
ಕಸದಿಂದ ರಸವಾಗಿ ಏನೆಲ್ಲಾ ಮಾಡಬಹುದು ಎನ್ನುವುದನ್ನು ಶಿಬಿರದ ಸಂಪನ್ಮೂಲ ವ್ಯಕ್ತಿಗಳು ತಿಳಿಸುವುದರ ಮೂಲಕ ಮಕ್ಕಳ ಅಮೂಲ್ಯ ಸಮಯವನ್ನು ಸಾರ್ಥಕಗೊಳಿಸಿದರು. ಮಂದಾರದ ಪ್ರಸಾದ್ ಸಾಲಿಕೇರಿ, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯ ಉಪಸ್ಥಿತರಿದ್ದರು. ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಕಾರ್ಯಕ್ರಮ ನಿರ್ವಹಿಸಿದರು.