ಕೋಟ ಗ್ರಾಮಪಂಚಾಯತ್ ವಿವಿಧ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ
ಕೋಟ(ಉಡುಪಿ ಟೈಮ್ಸ್ ವರದಿ): ಕರ್ನಾಟಕ ಸರಕಾರ, ಜಿ.ಪಂ. ಉಡುಪಿ ಹಾಗೂ ಕೋಟ ಗ್ರಾಮ ಪಂಚಾಯತ್ ಇವುಗಳ ಆಶ್ರಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ(ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನಾ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮ ಯೋಜನಾ) ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರುಗಳಿಗೆ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಬ್ಯಾಂಕ್ ಅಧಿಕಾರಿಗಳ ಸಮನ್ವಯದಲ್ಲಿ ವಿಮಾ ಸೌಲಭ್ಯ ಸಪ್ತಾಹ ಕಾರ್ಯಕ್ರಮ ಗುರುವಾರ ಕೋಟ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಯೂನಿಯನ್ ಬ್ಯಾಂಕ್ ಮಣೂರು ಶಾಖೆಯ ವ್ಯವಸ್ಥಾಪಕ ಸುಮನ್ ಸಕ್ಮಾ ಮತ್ತು ಕರ್ನಾಟಕ ಬ್ಯಾಂಕ್ ಕೋಟ ಶಾಖಾ ವ್ಯವಸ್ಥಾಪಕ ಸಂತೋಷ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯರಾದ ಚಂದ್ರ ಪೂಜಾರಿ, ಸಂತೋಷ ಪ್ರಭು, ಶಿವರಾಮ ಶೆಟ್ಟಿ, ಶೇಖರ ಜಿ, ಹಾಗೂ ಸಂಜೀವಿನಿ ಸಂಘದ ಅಧ್ಯಕ್ಷ ಕಲಾವತಿ ಅಶೋಕ, ಗ್ರಾ.ಪಂ. ಕಾರ್ಯದರ್ಶಿ ಮಂಜು ಉಪಸ್ಥಿತರಿದ್ದರು. ಪಿಡಿಒ ಸುರೇಶ ಕೆ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.