ಕುಂದಾಪುರ: ಅಕ್ರಮವಾಗಿ ಕೂಡಿಟ್ಟ ದನಗಳ ರಕ್ಷಣೆ

ಕುಂದಾಪುರ(ಉಡುಪಿ ಟೈಮ್ಸ್ ವರದಿ): ಗುಲ್ವಾಡಿ ಗ್ರಾಮದ ಕಾಂಡ್ಲಗದ್ದೆ ಮನೆಯೊಂದರಲ್ಲಿ ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕಳುವು ಮಾಡಿ ತಂದು ಹಿಂಸ್ಮಾತ್ಮಕವಾಗಿ ಕೂಡಿಟ್ಟ 23 ದನಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ದಾಳಿ ಮಾಡಿ ರಕ್ಷಿಸಲಾಗಿದೆ.

ಈ ಬಗ್ಗೆ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಉಪನಿರೀಕ್ಷಕರಾದ ಸುಧಾ ಪ್ರಭು ರವರ ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸರು.ಸ್ಥಳದಲ್ಲಿ 55,000/- ರೂಪಾಯಿ ಮೌಲ್ಯದ 23 ಜಾನುವಾರುಗಳು ಹಾಗೂ ಜಾನುವಾರುಗಳನ್ನು ಕಟ್ಟಲು ಉಪಯೋಗಿಸಿದ 23 ಹಗ್ಗ ವಶಪಡಿಸಿಕೊಂಡಿರುವುದಾಗಿದೆ ತಿಳಿಸಲಾಗಿದೆ.ಪೋಲೀಸರ ಜೀಪ್ ಮನೆ ಹತ್ತಿರ ಬರುವುದನ್ನು ಕಂಡು ಆರೋಪಿ ಅಬೂಬಕರ್ (42) ಪರಾರಿಯಾಗಿದ್ದಾನೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!