ಸಿದ್ದರಾಮಯ್ಯ ಮನೆಗೆ ಬಂದ ಸೊಸೆಯ ಹಾಗೆ,ಹಾಗಾಗಿ ವಲಸಿಗ ಎನ್ನಲು ಸಾಧ್ಯವಿಲ್ಲ: ಸಿ ಎಂ ಇಬ್ರಾಹಿಂ

ಬೆಂಗಳೂರು(ಉಡುಪಿ ಟೈಮ್ಸ್ ವರದಿ): ಮನೆಗೆ ಬಂದ ಸೊಸೆಯನ್ನು ನೀನು ವಲಸೆ ಬಂದವಳೆಂದು ಹೇಳಲಾಗುವುದೇ? ಮನೆಗೆ ಬರುವಾಗ ಸೊಸೆ ಹೊಸದಾಗಿಯೇ ಬರುವುದು ನಂತರ ಅವಳ ಕೈಗೆ ಕೀಲಿ ಕೈ ಸಿಗುತ್ತದೆ ಹಾಗೆಯೇ ಸಿದ್ದರಾಮಯ್ಯ ನವರ ಕೈಗೆ ಕೀಲಿ ಕೈ ಸಿಕ್ಕಿದೆ ಅವರನ್ನು ಹೊರಗಿನವರು, ವಲಸಿಗರು ಎನ್ನಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ ಉದಾಸಿ ತಮ್ಮದೇ ಶೈಲಿಯಲ್ಲಿ ನುಡಿದರು.

ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ ಅನ್ನು ಹಾಳು ಮಾಡಬೇಡಿ ಎಂಬ ಡಿ ಕೆ ಶಿವಕುಮಾರ್ ಶುಕ್ರವಾರ ಹೇಳಿದ್ದರು.
ಇತ್ತ ಈ ಕುರಿತು ಮಾತನಾಡಿದ ಇಬ್ರಾಹಿಂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದೂ ಯಾರು? ಬಳ್ಳಾರಿ ಪಾದಯಾತ್ರೆಯಲ್ಲಿ ಅವರನ್ನು ಮುಂದೆ ತಂದದ್ದು ಯಾರು? ಅವರು ಮುಖ್ಯಮಂತ್ರಿ ಆಗಬೇಕೆಂದು ನಾವೇ ಹೇಳಿದ್ದು ಅಲ್ಲವೇ ? ಸಿದ್ದರಾಮಯ್ಯ ಅವರಿಗೆ ಮೇಕಪ್ ಮಾಡಿದವರೇ ನಾವು ಎಂದು ನುಡಿದರು. ಮುಂದಿನ ಮುಖ್ಯಮಂತ್ರಿ ಚರ್ಚೆ ಮಾಡುವ ಮೊದಲು ಎಂ ಎಲ್ ಎ ಎಲೆಕ್ಷನ್ ಆಗಲಿ ಕಾಂಗ್ರೆಸ್ ಪಕ್ಷ ಗೆಲ್ಲಲ್ಲಿ ನಂತರ ಶಾಸಕರ ಅಭಿಪ್ರಾಯದಂತೆ ತೀರ್ಮಾನ ಪಡೆಯುವ ಶೇ 90 ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಮುಂದೆ ನೋಡುವ ಎಂದರು.

ಸಿದ್ದರಾಮಯ್ಯ ಹೀರೊ ಇದ್ದಾರೆ ಹಿನ್ನೆಲೆ ಗಾಯಕ ಸ್ವಲ್ಪ ಕ್ಯಾಸೆಟ್ ತೆಗೆದು ನೋಡಿ. 1 ರೂ ಗೆ ಅಕ್ಕಿ, ಮಧ್ಯಾಹ್ನದ ಊಟ ತಂದವರು ಯಾರು? ತಮಿಳುನಾಡಿನಲ್ಲಿ 2 ದಿನ ಅಧ್ಯಯನ ಮಾಡಿ ನಾನು ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಈ ಯೋಜನೆ ತಂದೆ” ಎಂದು ನುಡಿದರು.

ಯಡಿಯೂರಪ್ಪ ಪಕ್ಷ ಬಿಟ್ಟರೆ ಬಿಜೆಪಿ ಗೆ ಬರಿ 40 ಸೀಟ್: ಸಿದ್ದರಾಮಯ್ಯ ಗೆ ಒಂದು ಟೀಮ್ ಸಿಕ್ಕಿತ್ತು ಆದರೆ ಯಡಿಯೂರಪ್ಪಗೆ ತನ್ನದೇ ಆದ ತಂಡ ಇಲ್ಲ. ಯಡಿಯೂರಪ್ಪ ಹಾಗೂ ವಿಜೇಂದ್ರ ಒಂದು ಟೀಮ್. ಯಡಿಯೂರಪ್ಪಗೆ ಜಾತಿ ಬೆಂಬಲವಿದೆ ಯಡಿಯೂರಪ್ಪ ಪಕ್ಷ ತೊರೆದರೆ ಬಿಜೆಪಿ ಗೆ ಲೆವೆಲ್ 40 ಸೀಟ್ ಎಂದು ವ್ಯಂಗ್ಯಯಾಡಿದರು.

Leave a Reply

Your email address will not be published. Required fields are marked *

error: Content is protected !!