ಆನ್‌ಲೈನ್‌ ನಲ್ಲಿ ಮದ್ಯ ಖರೀದಿ: ಕೈ ಸುಟ್ಕೊಂಡ ಹಿರಿಯ ನಟಿ ಶಬಾನಾ ಅಜ್ಮಿ

ಮುಂಬೈ: ಆನ್‌ಲೈನ್‌ ವಂಚನೆ ಯಾರನ್ನು ಬಿಟ್ಟಿಲ್ಲ ಹಿರಿಯ ನಟಿಯೊಬ್ಬರ ಆನ್‌ಲೈನ್‌ನಲ್ಲಿ ವಂಚನೆಯಾಗಿರುವುದರ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಶಬಾನ್ ಅಜ್ಮಿ ವಂಚನೆಗೆ ಒಳಗಾದ ನಟಿ. ಆಲ್ಕೋಹಾಲ್ ವಿತರಣೆ ಮಾಡುವ ಸಂಸ್ಥೆಯಿಂದ ತನಗೆ ಮೋಸ ಆಗಿದೆ ಎಂದು ಬಾಲಿವುಡ್ ಹಿರಿಯ ನಟಿ ಶಬಾನಾ ಅಜ್ಮಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ

. ‘ಲಿವಿಂಗ್ ಲಿಕ್ವಿಡ್ಸ್’ ಫ್ಲಾಟ್‌ಫಾರ್ಮ್‌ನಲ್ಲಿ ಆಲ್ಕೋಹಾಲ್ ಬುಕ್ ಮಾಡಿದೆ. ಹಣ ಪಡೆದು, ಆರ್ಡರ್ ಮಾಡಿದ ವಸ್ತುವನ್ನು ತಂದು ಕೊಡಲಿಲ್ಲ ಎಂದು 70 ವರ್ಷದ ನಟಿ ಟ್ವಿಟ್ಟರ್‌ನಲ್ಲಿ ದೂರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಟಿ ”ಎಚ್ಚರ, ನಾನು ಲಿವಿಂಗ್ ಲಿಕ್ವಿಡ್ಸ್‌ನಿಂದ ಮೋಸ ಹೋಗಿದ್ದೇನೆ. ನಾನು ಮುಂಗಡವಾಗಿ ಹಣ ಪಾವತಿಸಿ ಆರ್ಡರ್ ಮಾಡಿದೆ, ಆದರೆ ನನ್ನ ಆರ್ಡರ್ ಬಂದಿಲ್ಲ, ಫೋನ್ ಮಾಡಿದರು ನನ್ನ ಕರೆ ಸ್ವೀಕರಿಸುತ್ತಿಲ್ಲ” ಎಂದು ಹೇಳಿಕೊಂಡಿರುವ ನಟಿ ಯಾವ ಖಾತೆಗೆ ಹಣ ಪಾವತಿ ಮಾಡಿದೆ ಎಂದು ಬಹಿರಂಗಪಡಿಸಿದ್ದಾರೆ. ಆದರೆ ಎಷ್ಟು ಹಣ ಪಾವತಿಸಿದರು ಎಂದು ಉಲ್ಲೇಖಿಸಿಲ್ಲ. ಶಬಾನಾ ಅಜ್ಮಿ ತಮಗಾದ ವಂಚನೆ ಬಗ್ಗೆ ಮಾಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಆನ್‌ಲೈನ್ ವಂಚನೆಯ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೂ ಮುಂಚೆ ಬಾಲಿವುಡ್ ಕಲಾವಿದರಾದ ಅಕ್ಷಯ್ ಕುಮಾರ್, ನರ್ಗಿಸ್ ಫಕ್ರಿ, ಕರಣ್ ಸಿಂಗ್ ಗ್ರೋವರ್‌ಗೂ ಸಹ ಆನ್‌ಲೈನ್‌ ವಂಚನೆಗೆ ಒಳಗಾಗಿದ್ದರು.

Leave a Reply

Your email address will not be published. Required fields are marked *

error: Content is protected !!