ಉಡುಪಿ: ಬೈಕ್ ನಲ್ಲಿದ್ದ ಬ್ಯಾಂಕ್ ದಾಖಲೆ ಕಳವುಗೈದು ಹಣ ಲೂಟಿ

ಉಡುಪಿ ಜೂ.24( ಉಡುಪಿ ಟೈಮ್ಸ್ ವರದಿ): ನಿಲ್ಲಿಸಿದ್ದ ಬೈಕ್ ನಲ್ಲಿದ್ದ ಬ್ಯಾಂಕ್ ಗೆ ಸಂಬಂಧಿಸಿದ ದಾಖಲೆ ಗಳನ್ನು ಕಳವು ಮಾಡಿ ಲಕ್ಷಾಂತರ ರೂ ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಬಗ್ಗೆ ತೋನ್ಸೆ ಗ್ರಾಮದ ಉದಯ್‌ ಕುಮಾರ್‌ ಎಂಬವರು ದೂರು ನೀಡಿದ್ದು, ಅದರಂತೆ ಉದಯ್ ಕುಮಾರ್ ಅವರು ಉಡುಪಿಯ ಸಂತೆಕಟ್ಟೆಯಲ್ಲಿರುವ ದಶಮಿ ಪ್ರೋವಿಶನ್ ಸ್ಟೋರ್ಸ್ ನ ಮಾಲೀಕರಾಗಿದ್ದಾರೆ,

ಆರೋಪಿ‌ ಗೋಪಾಲ ಅಮೀನ್‌(55) ಎಂಬಾತ ಜೂ.23 ರಂದು ಕರಾವಳಿ ಬೈಪಾಸ್ ಬಳಿ ಉದಯ ಕುಮಾರ ರವರು ನಿಲ್ಲಿದ್ದ ಸ್ಕೂಟರಿನಲ್ಲಿದ್ದ ಬ್ಯಾಗ್ ನ್ನು ಕಳವು ಮಾಡಿದ್ದಾನೆ. ಆ ಬ್ಯಾಗ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲ್ಯಾಣಪುರ ಶಾಖೆಯ ಚೆಕ್ ಬುಕ್ ಮತ್ತು ಸ್ಟಾರ್ ಪ್ಲಸ್ ಕಂಪೆನಿಯ ಬಾಂಡ್ ಗಳು ಇದ್ದವು. ಅಲ್ಲದೆ ಆರೋಪಿ ಬ್ಯಾಗ್ ನಲ್ಲಿ ಇದ್ದ ಚೆಕ್ ನ್ನು ದುರ್ಬಳಕೆ ಮಾಡಿ ಚೆಕ್ಕಿಗೆ ಆರೋಪಿತನೇ ಬರೆದು 10,00,000 ಹಣ ಪಡೆದಿರುತ್ತಾನೆ. ಅದರಂತೆ ಆರೋಪಿಯು ಚೆಕ್ಕನ್ನು ಕಸಿದುಕೊಂಡು ಹೋಗಿ ವಂಚಿಸಿರುವುದಾಗಿ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!