ಕೋಟ: ಕಾನೂನು ಅರಿವು ಕಾರ್ಯಕ್ರಮ
ಕೋಟ(ಉಡುಪಿ ಟೈಮ್ಸ್ ವರದಿ): ಇಲ್ಲಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಪಂಗಡದವರಿಗೆ ವಿವಿಧ ಸವಲತ್ತುಗಳ ಕಾರ್ಯಯೋಜನೆ, ಕುಂದುಕೊರತೆಗಳ ವಿಶೇಷ ಗ್ರಾಮಸಭೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಮಂಗಳವಾರ ಪಂಚಾಯತ್ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯದ ನ್ಯಾಯವಾದಿ ಉದಯ್ ಕುಮಾರ್ ಮಾತನಾಡಿ ಪ್ರತಿಯೊರ್ವರಿಗೂ ಕಾನೂನಿನ ಅರಿವು ಅತ್ಯಗತ್ಯ ಆದರೆ ಅದನ್ನು ಪಡೆದುಕೊಳ್ಳದೆ ಹಿಂದುಳಿಯುವರ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಬಹುಮುಖ್ಯವಾಗಿ ಪರಿಶಿಷ್ಟ ಜಾತಿಪಂಗಡದವರಿಗೆ ವಿಶೇಷವಾಗಿ ಇದರ ಪ್ರಯೋಜನ ಪಡೆಯುವ ಅಗತ್ಯತೆಯನ್ನು ಮನಗಾಣಿಸಿದರು.ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು.
ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್ ವಹಿಸಿದರು. ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷೆ ಸರಸ್ವತಿ, ಪಂಚಾಯತ್ ಸದಸ್ಯರಾದ ರಶ್ಮಿತಾ,ಅಂತೋನಿ ಡಿಸೋಜ,ಮಾಜಿ ಅಧ್ಯಕ್ಷೆ ಗುಲಾಬಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೆನ್ನಿ ಕ್ವಾಡ್ರಸ್ ಕಾರ್ಯಕ್ರಮ ನಿರ್ವಹಿಸಿದರು.
ಕೋಟ.ಜೂ೨೩ ಕೋಡಿ ಗ್ರಾಮಸಭೆ