ಕೋಟ: ಪಡುಕರೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ
ಕೋಟ(ಉಡುಪಿ ಟೈಮ್ಸ್ ವರದಿ) : ಲಕ್ಷ್ಮೀ ಸೋಮ ಬಂಗೇರ ಸ.ಪ್ರ.ಕಾಲೇಜು ಪಡುಕರೆ ಇಲ್ಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಮಹತ್ವದ ಯೋಜನೆಯಾದ ವಿದ್ಯಾರ್ಥಿಗಳಿಗೆ ಟ್ಯಾಬ್ ಸಾಂಕೇತಿಕ ವಿತರಣಾ ಸಮಾರಂಭ ಕೋವಿಡ್ ನಿಯಮಾನುಸಾರ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಟ್ಯಾಬ್ ವಿತರಿಸಿ ಮಾತನಾಡಿದ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ.ಸಿ ಪ್ರಕಾಶ್ ತೋಳಾರ್ ಹಿಂದೆ ನಾವುಗಳು ಗ್ರಂಥಾಲಯಕ್ಕೆ ತೆರಳಿ ಪುಸ್ತಕ ಓದವ ಕಾಲವೊಂದಿತ್ತು, ಆದರೆ ಇಂದಿನ ಕಾಲಕ್ಕೆ ಹೊಲಿಸಿದರೆ ಬಾರಿ ಅಜಗಜಾಂತರ ವ್ಯತ್ಯಾಸಗಳು ಬದಲಾವಣೆಗಳು ಕಾಣಬುಹಾಗಿದೆ.ಅದರಲ್ಲಿ ಬಹುಮುಖ್ಯವಾಗಿ ಆಧುನಿಕ ತಂತ್ರಜ್ಞಾನಯುಕ್ತ ಮೊಬೈಲ್‌ಗಳ ಮೂಲಕ ಜಗತ್ತೆ ಸಂದರ್ಶಿಸುವ ಅಥವಾ ಪಠ್ಯಗಳನ್ನು ತಿಳಿಯುವ ಭಾಗ್ಯ ಇಂದಿನ ವಿದ್ಯಾರ್ಥಿಗಳಿಗೆ ಲಭಿಸಿದೆ.ಸರಕಾರ ವಿದ್ಯಾರ್ಥಿಗಳಿಗೆ ವಿಶೇಷ ಮುತುವರ್ಜಿಯೊಂದ ಟ್ಯಾಬ್ ನೀಡಿದ್ದು ಅದನ್ನು ಸಮರ್ಪಕವಾಗಿ ವಿದ್ಯಾಭ್ಯಾಸಕ್ಕೆ ಬಳಸಿಕೊಂಡು ಶೈಕ್ಷಣಿಕವಾಗಿ ಮುಂದುವರಿಬೇಕು ಎಂದು ಕರೆನೀಡಿದರಲ್ಲದೆ.ಮೊಬೈಲ್ ಒಳಗಿನ ತಂತ್ರಾಂಶ ಒದುವ ಹವ್ಯಾಸಕ್ಕೆ ಬಳಸಿಕೊಂಡು ಯಶಸ್ಸಿನ ಹಾದಿಗೆ ಮುನ್ನುಡಿ ಬರೆಯಿರಿ ಎಂದು ಶುಭಹಾರೈಸಿದರು
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಹತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ಅಧ್ಯಕ್ಷತೆ ವಹಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಎಚ್ ಕುಂದರ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ್ ಎಂ ವೈದ್ಯ ಪ್ರಾಸ್ತಾವನೆಗೈದರು.ನಿತೀನ್ ಎ ಚೋಳ್ಳೆಕರ್ ಸ್ವಾಗತಿಸಿದರು.ಕಾರ್ಯಕ್ರಮವನ್ನು ಉಪನ್ಯಾಸಕ ಮಂಜುನಾಥ್ ಆಚಾರ್ ನಿರೂಪಿದರು.ಉಪನ್ಯಾಸಕ ರವಿಪ್ರಸಾದ್ ವಂದಿಸಿದರು.