ಶಾಲೆ ಆರಂಭವಾಗದೆ ಇದ್ದಲ್ಲಿ ಮಕ್ಕಳಲ್ಲಿ ಭಿಕ್ಷಾಟನೆ, ಬಾಲ‌ ಕಾರ್ಮಿಕ ಪಿಡುಗು ಹೆಚ್ಚಾಗುವುದು:ಡಾ ದೇವಿ ಪ್ರಸಾದ್ ಶೆಟ್ಟಿ ಎಚ್ಚರಿಕೆ

ಬೆಂಗಳೂರು ಜೂ.23: ಕೋವಿಡ್ 3 ನೇ ಅಲೆಯ ಗಾಳಿ ರಾಜ್ಯದತ್ತ ಬೀಸುತ್ತಿದೆ. ಅಲ್ಲದೆ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೇ ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. . ಹೀಗಿರುವಾಗ ಮತ್ತೊಂದು ತಜ್ಞರ ಸಮಿತಿ ಶಾಲಾ ಕಾಲೇಜುಗಳನ್ನು ಆರಂಭಿಸುವಂತೆ ಸರಕಾರಕ್ಕೆ ಸಲಹೆ ನೀಡಿದೆ.
ಶಾಲೆಗಳನ್ನು ಆರಂಭಿಸುವ ಕುರಿತು ಪ್ರಸಿದ್ಧ ವೈದ್ಯ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿ ರಾಜ್ಯ ಸರಕಸರಕ್ಕೆ ಶಾಲೆ ಆರಂಭಿಸುವಂತೆ ಶಿಫಾರಸು ಮಾಡಿದೆ.
ಅದರಂತೆ ಶಾಲೆ ಆರಂಬಿಸದಿರುವುದು ಕೋವಿಡ್ ಪರಿಣಾಮ ಗಿಂತ ಕೆಟ್ಟದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಶಾಲೆ ಆರಂಭಿಸದಿದ್ದರೆ ಮಕ್ಕಳಲ್ಲಿ ಅಪೌಷ್ಟಿಕತೆ , ಭಿಕ್ಷಾಟನೆ, ಬಾಲ‌ ಕಾರ್ಮಿಕ ಗಳಂತಹ ಪಿಡುಗು ಹೆಚ್ಚಾಗುವ ಸಾಧ್ಯತೆ ಇದೆ‌. ಅಲ್ಲದೆ ಮಕ್ಕಳಲ್ಲಿ ಖಿನ್ನತೆ , ಆತಂಕ , ಒತ್ತಡ ಹೆಚ್ಚಾಗಬಹುದು ಎಂದು ತಿಳಿಸಿದೆ.

ಇನ್ನು ಜಗತ್ತಿನಲ್ಲಿ ಎಲ್ಲೂ ಮಕ್ಕಳಿಗೆ ದೊಡ್ಡ ಮಟ್ಟದಲ್ಲಿ ಸೋಂಕು ಕಂಡುಬಂದಿಲ್ಲ ಆದ್ದರಿಂದ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಶಾಲಾಭಿವೃದ್ದಿ ಸಮಿತಿಗೆ ಬಿಡುವಂತೆ ಸಲಹೆ ನೀಡಿದೆ. ಪೋಷಕರು , ಮಕ್ಕಳು, ಶಿಕ್ಷಕರಿಗೆ ಸಮರೋಪಾದಿಯಲ್ಲಿ ಲಸಿಕೆ ಹಾಕಿಸಿ ಹಾಗೂ ಶಿಕ್ಷಕರು ಶಾಲಾ ಸಿಬ್ಬಂದಿಯನ್ನು ವಾರಿಯರ್ಸ್‌ ಎಂದು ಪರಿಗಣಿಸಬೇಕು.‌ ಶಾಲೆಗೆ ಬರುವ ಮಕ್ಕಳಿಗೆ ತಲಾ 2 ಲಕ್ಷ ರೂ ಕೋವಿಡ್ ವಿಮೆ ಕಲ್ಪಿಸುವುದು ಹಾಗೂ ಶಾಲೆ ಆರಂಭದ ಬಳಿಕ ಮನೆಮನೆಗೆ ತೆರಳಿ ಪೋಷಕರಿಗೆ ಧೈರ್ಯ ಹೇಳುವುದು ಇವೆ ಮೊದಲಾದ ಅಂಶಗಳನ್ನು ಒಳಗೊಂಡು ಶಾಲೆಗಳನ್ನು ಆರಂಭಿಸುವಂತೆ ಶಿಫಾರಸು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!